ಮನೋಹರ ಪರಿಕ್ಕರ್ 
ದೇಶ

ಗೋವಾ ಸದನದಲ್ಲಿ ವಿಶ್ವಾಸಮತ ಯಾಚನೆಗೆ ಕಾಂಗ್ರೆಸ್ ಪಟ್ಟು, ಮುಖ್ಯಮಂತ್ರಿ ಪರಿಕ್ಕರ್ ರಾಜೀನಾಮೆಗೆ ಒತ್ತಾಯ

ಗೋವಾದಲ್ಲಿ ಬಿಜೆಪಿ "ಅಧಿಕಾರದ ದಾಹ"ದಿಂದ ಕೂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ರಾಜೀನಾಮೆ ಸಲ್ಲಿಸಬೇಕು

ನವದೆಹಲಿ: ಗೋವಾದಲ್ಲಿ ಬಿಜೆಪಿ "ಅಧಿಕಾರದ ದಾಹ"ದಿಂದ ಕೂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ರಾಜೀನಾಮೆ ಸಲ್ಲಿಸಬೇಕು.  ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ನಡೆಸುವ ಮೂಲಕ ಬಹುಮತ ಸಾಬೀತುಪಡಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.
ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಹಾಗೂ ಗೋವಾ  ಪಿ.ಸಿ.ಸಿ ಮುಖ್ಯಸ್ಥ ಗಿರೀಶ್ ಚೋಡಂಕರ್ ಬಿಜೆಪಿ ಪರಿಕ್ಕರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ್ಬುದಿಲ್ಲ, ಬಹುಷಃ ಅವರು ರಾಫೆಲ್ ಡೀಲ್ ನಲ್ಲಿ ಮುಖ್ಯ ಪಾತ್ರವಹಿಸಿದ್ದರೆಂದು ಕಾಣುತ್ತದೆ ಎಂದಿದ್ದಾರೆ. ಬಿಜೆಪಿಯವರು ಗೋವಾದ ಜನರಿಗೆ ದ್ರೋಹಬಗೆಯುತ್ತಿದ್ದಾರೆ ಹಾಗೂ ರಾಜ್ಯದಲ್ಲಿ ಆಡಳಿತವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅವರು ಆರೋಪಿಸಿದರು.
"ಅಧಿಕಾರದ ದಾಹದಿಂದ ಬಿಜೆಪಿ ಗೋವಾದಲ್ಲಿ ಪ್ರಜಾಪ್ರಭುತ್ವವನ್ನು ಮಟ್ಟ ಹಾಕಿದ್ದು ಇದೀಗ ಆಡಳಿತ  ಯಂತ್ರವನ್ನೇ ಸ್ಥಗಿತಗೊಳಿಸಿದೆ.ಅಧಿಕಾರಕ್ಕಾಗಿ ಭ್ರಷ್ಠ, ಕೆಟ್ಟ ಹಾಗೂ ಮೋಸದ ಆಟವನ್ನು ಬಿಜೆಪಿ ನಡೆಸಿದೆ.ಗೋವಾದಲ್ಲಿ ಅಧಿಕಾರಕ್ಕೆ ಮುಂದುವರಿಯಲು ಬಿಜೆಪಿ ಯಾವುದೇ ಸಾಂವಿಧಾನಿಕ ಹಕ್ಕು ಹೊಂದಿಲ್ಲ" ಖೇರಾ ಹೇಳಿದ್ದಾರೆ.
ಗೋವಾದಲ್ಲಿ ಹಿಂಬದಿ ಬಾಗಿಲಿನಿಂದ ಬಿಜೆಪಿ ಅಧಿಕಾರಕ್ಕೆ ಏರಿದೆ. ಗೋವಾದ ಜನರು ಕಾಂಗ್ರೆಸ್ ಗೆ ಮತ ನೀಡಿದ್ದಾರೆ.ರಾಜ್ಯಪಾಲರಾದ ಮೃದುಲಾ ಸಿನ್ಹಾ ಗೋವಾ  ಜನತೆ ಹಾಗೂ ವಿರೋಧ ಪಕ್ಷಗಳ ದನಿ ಆಲಿಸಬೇಕು.ಹಾಗೂ ಸದನದಲ್ಲಿ ವಿಶ್ವಾಸಮತ ಸಾಬೀತಿಗೆ ಅವಕಾಶ ಕಲ್ಪಿಸಬೇಕು ಎಂದು ಚೋಡಂಕರ್ ಹೇಳಿದ್ದಾರೆ.
ಗೋವಾ ಅಸೆಂಬ್ಲಿಯ ವಿಶೇಷ ಅಧಿವೇಶನವನ್ನು ತಕ್ಷಣ ಕರೆಯಬೇಕು.ಅಲ್ಲಿ ವಿಶ್ವಾಸಮತ ಯಾಚನೆಗೆ ಅವಕಾಶ ಕಲ್ಪಿಸಬೇಕು.ಇದೀಗ ಗೋವಾದಲ್ಲಿ ನಿಜಕ್ಕೂ ಯಾರು ಅಧಿಕಾರದಲ್ಲಿದ್ದಾರೆ, ಯಾರಿಗೆ ಅಧಿಕಾರ ನಡೆಸುವ ಹಕ್ಕಿದೆ ಎನ್ನುವ ಕುರಿತು ಸಂಶಯವಿದೆ ಎಂದು ಚೋದಂಕರ್ ಹೇಳಿದರು. ಗೋವಾದಲ್ಲಿ ಕಾಂಗ್ರೆಸ್ ಗೆ ಬಹುಮತವಿದೆ. ಎಂದ ಅವರು "ಗೋವಾ ಜನರು ಪೂರ್ಣಾವಧಿ ಮುಖ್ಯ ಮಂತ್ರಿಗಳನ್ನು ಪಡೆಯುವ ಅರ್ಹತೆ ಹೊಂದಿದ್ದಾರೆ.ಜಾಪ್ರಭುತ್ವ ಮತ್ತು ಸಾಂವಿಧಾನಿಕ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವಾಸ ಮತ ಯಾಚನೆ ಅತ್ಯಗತ್ಯವಾಗಿದೆ ಎಂದರು,
 "ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರುಗಳಿಂದ ಯಾವುದೇ ಸಂವಿಧಾನಾತ್ಮಕ ನೈತಿಕತೆಯನ್ನು ನಿರೀಕ್ಷಿಸಲಾರೆವು ಏಕೆಂದರೆ ಅವರು ಅಧಿಕಾರದ ನಶೆಯಲ್ಲಿದ್ದಾರೆ ಎಂದು ಅವರು ಆರೋಪಿಸಿದರು. ಬಹುಷಃ ಮಾಜಿ ರಕ್ಷಣಾ ಸಚಿವರಾಗಿದ್ದ ಪರಿಕ್ಕರ್ ರಾಫೆಲ್ ಒಪ್ಪಂದದ ಬಗ್ಗೆ ಸಾಕಷ್ಟು ತಿಳಿದಿದ್ದಾರೆ.ಹೀಗಾಗಿ ಪ್ರಧಾನಿ ಅಥವಾ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುತ್ತಿಲ್ಲ " ಪ್ರಶೆಯೊಂದಕ್ಕೆ ಉತ್ತರಿಸಿದ ಚೋಡಂಕರ್ ಹೇಳಿದ್ದಾರೆ.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಪರಿಕ್ಕರ್ ಸರ್ಕಾರವು  23 ಶಾಸಕರ ಬೆಂಬಲವನ್ನು ಹೊಂದಿದೆ. ಇವುಗಳಲ್ಲಿ 14 ಬಿಜೆಪಿ ಶಾಸಕರು, ತಲಾ ಮೂರು ಮಂದಿ ಗೋವಾ ಫಾರ್ವರ್ಡ್ ಪಾರ್ಟಿ,ಎಂಜಿಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿದ್ದಾರೆ.
ಗೋವಾ ಅಸೆಂಬ್ಲಿಯಲ್ಲಿ 16 ಶಾಸಕರೊಂದಿಗೆ ಕಾಂಗ್ರೆಸ್ ಏಕೈಕ ಅತಿದೊಡ್ಡ ವಿರೋಧ ಪಕ್ಷವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!