ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಾತು ಬಾರದ ಮೂಕಿ ಮೇಲೆ ಅತ್ಯಾಚಾರ: 4 ಸೇನಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು

ಮಾತು ಬಾರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಸೇನಾ ಸಿಬ್ಬಂದಿ ವಿರುದ್ಧ...

ಸಾಂದರ್ಭಿಕ ಚಿತ್ರ
Lingaraj Badiger
Updated On : 17 Oct 2018, 3:30 am
ಪುಣೆ: ಮಾತು ಬಾರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಸೇನಾ ಸಿಬ್ಬಂದಿ ವಿರುದ್ಧ ಪುಣೆ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ.
ಸಂತ್ರಸ್ತ ಮಹಿಳೆ ಇಂದೋರ್ ನ ಎನ್ ಜಿಒವೊಂದಕ್ಕೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಎನ್ ಜಿಎ ಪೊಲೀಸರಿಗೆ, ರಕ್ಷಣಾ ಸಚಿವಾಲಯಕ್ಕೆ ಮತ್ತು ಸೇನಾ ಮುಖ್ಯಸ್ಥರಿಗೂ ದೂರು ಸಲ್ಲಿಸಿದೆ.
ಈ ಸಂಬಂಧ ಖಡ್ಕಿ ಪೊಲೀಸರು ನಾಲ್ವರು ಸೇನಾ ಸಿಬ್ಬಂದಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಮೂವರ ವಿರುದ್ಧ ಐಪಿಸಿ ಸೆಕ್ಷೆನ್ 376 ಹಾಗೂ ಒಬ್ಬರ ವಿರುದ್ಧ ಐಪಿಸಿ ಸೆಕ್ಷನ್ 354ರಡಿ ಕೇಸ್ ದಾಖಲಿಸಿದ್ದಾರೆ.

Advertisement

Advertisement

ಈ ನಾಲ್ವರು ಸಿಬ್ಬಂದಿ ಸೇನಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆಸ್ಪತ್ರೆಯಲ್ಲಿಯೇ ಮೂಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement