ದೇಶ

ಉತ್ತರ ಪ್ರದೇಶ: ಪಾಕ್ ಐಎಸ್ಐಗೆ ಮಾಹಿತಿ ನೀಡುತ್ತಿದ್ದ ಭಾರತೀಯ ಯೋಧನ ಬಂಧನ

Lingaraj Badiger
ಮೀರತ್: ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐಗೆ ಸೇನಾ ಮಾಹಿತಿ ನೀಡುತ್ತಿದ್ದ ಭಾರತೀಯ ಯೋಧನನ್ನು ಉತ್ತರ ಪ್ರದೇಶದ ಕಾಂಟೋನ್ಮೆಂಟ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆ ವಿಶೇಷವಾಗಿ ಪಶ್ಚಿಮ ಕಮಾಂಡ್ ಗೆ ಸಂಬಂಧಿಸಿದ ಗೌಪ್ಯ ಮತ್ತು ಪ್ರಮುಖ ಮಾಹಿತಿಯನ್ನು ಯೋಧ ವಾಟ್ಸ್ ಆಪ್ ಮೂಲಕ ಐಎಸ್ಐಗೆ ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಬಂಧಿತ ಯೋಧನನ್ನು ಎರಡು ವರ್ಷಗಳ ಹಿಂದೆ ಮೀರತ್ ಸಿಗ್ನಲ್ ರೆಜಿಮೆಂಟ್ ನಲ್ಲಿ ನಿಯೋಜಿಸಲಾಗಿತ್ತು ಮತ್ತು ಕಳೆದ 10 ತಿಂಗಳಿಂದ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಧನ ವಿರುದ್ಧ ಸೇನಾ ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ.
SCROLL FOR NEXT