ಸಂಗ್ರಹ ಚಿತ್ರ 
ದೇಶ

ವಿದೇಶಕ್ಕಿಂತ ಹೆಚ್ಎಎಲ್ ಯುದ್ಧ ವಿಮಾನ ದುಬಾರಿ: ರಕ್ಷಣಾ ಇಲಾಖೆ ಲೆಕ್ಕಪರಿಶೋದನಾ ವರದಿ

ದೇಶದೆಲ್ಲಡೆ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಕುರಿತು ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಸ್ವದೇಶಿ ಸಂಸ್ಥೆ ಹೆಚ್ಎಎಲ್ ನಿರ್ಮಿಸುತ್ತಿರುವ ಯುದ್ಧ ವಿಮಾನಗಳು ವಿದೇಶಿ ಕಂಪನಿಗಳು ನಿರ್ಮಿಸುತ್ತಿರುವ ಅದೇ ಗುಣಮಟ್ಟದ ಯುದ್ಧ...

ನವದೆಹಲಿ: ದೇಶದೆಲ್ಲಡೆ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಕುರಿತು ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಸ್ವದೇಶಿ ಸಂಸ್ಥೆ ಹೆಚ್ಎಎಲ್ ನಿರ್ಮಿಸುತ್ತಿರುವ ಯುದ್ಧ ವಿಮಾನಗಳು ವಿದೇಶಿ ಕಂಪನಿಗಳು ನಿರ್ಮಿಸುತ್ತಿರುವ ಅದೇ ಗುಣಮಟ್ಟದ ಯುದ್ಧ ವಿಮಾನಗಳಿಂತ ದುಬಾರಿ ಎಂಬುದು ರಕ್ಷಣಾ ಇಲಾಖೆಯ ಲೆಕ್ಕ ಪರಿಶೋಧನಾ ವರದಿಯಿಂದ ತಿಳಿದುಬಂದಿದೆ. 
ರಷ್ಯಾ ಮೂಲದ ಉಪಕರಣ ತಯಾರಕ ಸಂಸ್ಥೆಯಲ್ಲಿ ನಿರ್ಮಾಣವಾಗುವ ಸುಖೋಯ್-30ಎಂಕೆಐ ಯುದ್ಧ ವಿಮಾನ ದರ ರೂ.269.77 ಕೋಟಿ ಆದರೆ, ಹೆಚ್ಎಎಲ್'ನಲ್ಲಿ ಉತ್ಪಾದನೆಯಾಗುವ ಇದೇ ವಿಮಾನದ ಬೆಲೆ ರೂ.417.69 ಕೋಟಿ ಏರಿಕೆಯಾಗುತ್ತದೆ. 
ಇದರಿಂದ ಹೆಚ್ಎಎಲ್'ನಲ್ಲಿ ತಯಾರಾಗುವ ಯುದ್ಧ ವಿಮಾನವೊಂದಕ್ಕೆ ವಿದೇಶಿ ವಿಮಾನಕ್ಕೆ ನೀಡಲಾಗುವ ದರಕ್ಕಿಂತ ಹೆಚ್ಚುವರಿ ರೂ.150 ಕೋಟಿ ತೆರಬೇಕಾಗುತ್ತದೆ. ಅದೇ ರೀತಿ, ಬ್ರಿಟಿಷ್ ಏರೋಸ್ಪೇಸ್ ಉತ್ಪಾದಿಸುವ ಹಾಕ್ ತರಬೇತಿ ವಿಮಾನ ದರ ಮತ್ತು ಹೆಚ್ಎಎಲ್ ಉತ್ಪಾದಿಸುವ ಅದೇ ವಿಮಾನದ ದರಕ್ಕೂ ಭಾರೀ ವ್ಯತ್ಯಾಸವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ