ದೇಶ

ಅಲಹಾಬಾದ್ ನಂತರ ಫೈಜಾಬಾದ್ ಗೆ ಶ್ರೀ ಅಯೋಧ್ಯೆ ಎಂದು ನಾಮಕರಣಕ್ಕೆ ಒತ್ತಾಯ

Shilpa D
ಲಕ್ನೋ: ಅಲಹಾಬಾದ್ ನಗರದ ಹೆಸರನ್ನು ಪ್ರಯಾಗರಾಜ್ ಎಂದು ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ, ಫೈಜಾಬಾದ್ ನಗರಕ್ಕೆ ಶ್ರೀ ಅಯೋಧ್ಯ ಎಂದು ಹೆಸರಿಡಬೇಕೆಂಬ ಕೂಗುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಮೊದಲ ಬಾರಿಗೆ ತನ್ನ ಧ್ವನಿ ಎತ್ತಿದೆ.
ವಿದೇಶಿಗರಿಂದ ಆಕ್ರಮಣಕ್ಕೊಳಗಾದ ನಂತರ ಈ ನಗರಗಳ ಹೆಸರುಗಳನ್ನು ಬದಲಾಯಿಸಲಾಗಿತ್ತು, ಹೀಗಾಗಿ ಮೂಲ ಹೆಸರುಗಳ ಮರು ನಾಮಕರಣ ಮಾಡಬೇಕು ಎಂದು ವಿಎಚ್ ಪಿ ಸಲಹೆ ಸದಸ್ಯ ಪುರುಷೋತ್ತಮ ನಾರಾಯಣ್  ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ಹಲವು ಸಂತರು, ಸಾಧುಗಳು, ಹಾಗೂ ವಿವಿಧ ಸಂಘಟನೆಗಳು ಒತ್ತಾಯದ ಮೇರೆಗೆ  ಅಲಹಾಬಾದ್ ಅನ್ನು ಪ್ರಯಾಗರಾಜ್ ಆಗಿ ಬದಲಾಯಿಸಲಾಗಿತ್ತು, ಈ ನಿರ್ಧಾರ ಸ್ವಾಗತಾರ್ಹ, ಹೀಗಾಗಿ ಫೈಜಾಬಾದ್ ಅನ್ನು ಶ್ರೀ ಅಯೋಧ್ಯೆ ಎಂದು ಬದಲಾಯಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.
ಸರ್ಕಾರ ಜನರ ಭಾವನೆಗಳಿಗೆ ಮಹತ್ವ ಕೊಡುತ್ತದೆ ಎಂಬುದು ಈ ನಿರ್ಧಾರದಿಂದ ತಿಳಿದು ಬರುತ್ತಿದೆ ಎಂದು ವಿಚ್ ಪಿ ವಕ್ತಾರ ಶಾರದ್ ಶರ್ಮಾ ಹೇಳಿದ್ದಾರೆ.
SCROLL FOR NEXT