"100 ರೈಲುಗಳು ಬಂದರೂ ಹಳಿ ಮೇಲೆ ನಿಂತಿರುವವರು ಕದಲುವುದಿಲ್ಲ": ಅಪಘಾತಕ್ಕೂ ಕೆಲವೇ ಕ್ಷಣಗಳ ಮೊದಲು ಆಯೋಜರ ಮಾತು!
ಅಮೃತ್ ಸರ: ಅಮೃತಸರದಲ್ಲಿ ವಿಜಯದಶಮಿ ವೇಳೆ ನಡೆಯುತ್ತಿದ್ದ ರಾವಣ ದಹನ ಕಾರ್ಯಕ್ರಮದಲ್ಲಿ ನಡೆದ ರೈಲು ಅಪಘಾತದ ಬಗ್ಗೆ ಹೊಸ ಮಾಹಿತಿಯೊಂದು ಲಭ್ಯವಾಗಿದ್ದು, ರೈಲು ಹಳಿ ಬಳಿ ಕಾರ್ಯಕ್ರಮ ಆಯೋಜನೆ ಮಾಡಿದ್ದವರು 100 ರೈಲುಗಳು ಬಂದರೂ ಹಳಿ ಮೇಲೆ ನಿಂತಿರುವವರು ಕದಲುವುದಿಲ್ಲ ಎಂದು ಹೇಳಿರುವುದು ಬಹಿರಂಗವಾಗಿದೆ.
ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕಿ ನವ್ ಜೋತ್ ಕೌರ್ ಸಿಧು ಆಗಮಿಸಿದ್ದರು. ಅವರನ್ನು ಸ್ವಾಗತಿಸುತ್ತಿದ್ದ ಕಾರ್ಯಕ್ರಮದ ಆಯೋಜಕರು, "ಮೈದಾನದ ಒಳಗೆ ಅಥವಾ ಹೊರಗೆ ನಿಂತಿರುವವರು ನವ್ ಜೋತ್ ಕೌರ್ ಸಿಧು ಅವರನ್ನು ನೋಡಲು ಎಷ್ಟು ಕಾತುರರಾಗಿದ್ದಾರೆ ಎಂದರೆ ಹಳಿ ಬಳಿ ನಿಂತಿರುವವರು 100 ರೈಲುಗಳು ಬಂದರೂ ಅಲ್ಲಿಂದ ಕದಲುವುದಿಲ್ಲ ಎಂಬ ಮಾತನ್ನಾಡಿದ್ದರು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದ ನವ್ ಜೋತ್ ಕೌರ್ ಅವರನ್ನು ಸ್ವಾಗತಿಸಿದ್ದ ಆಯೋಜಕರು, ತಮ್ಮ ಭಾಷಣದಲ್ಲಿ "5,000 ಜನರು ರೈಲ್ವೆ ಹಳಿಯ ಮೇಲೆ ನಿಮ್ಮನ್ನು ನೋಡಲೆಂದೇ ನಿಂತಿದ್ದಾರೆ. 500 ರೈಲುಗಳು ಬಂದರಲ್ಲೂ ಅವರು ಅಲ್ಲಾಡುವುದಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.