ಭಾರತ ನೇತಾಜಿ ಕಲ್ಪನೆಯ ಸೇನೆಯನ್ನು ನಿರ್ಮಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ 
ದೇಶ

ಭಾರತ ನೇತಾಜಿ ಕಲ್ಪನೆಯ ಸೇನೆಯನ್ನು ನಿರ್ಮಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ

ನೇತಾಜಿ ಸುಭಾಷ್ ಚಂದ್ರ ಬೋಸರು ರಾಷ್ಟ್ರ ನಿರ್ಮಾಣದಲ್ಲಿ ಈಶಾನ್ಯ ರಾಜ್ಯಗಳ ಮಹತ್ವವನ್ನು ಮನಗಂಡಿದ್ದರು, ಅಂತೆಯೇ ನಮ್ಮ ಸರ್ಕಾರ ಸಹ ಈಶಾನ್ಯ ರಾಜ್ಯಗಳ ಮಹತ್ವವನ್ನು ಅರಿತಿದೆ ಎಂದು ಪ್ರಧಾನಿ

ನೇತಾಜಿ ಸುಭಾಷ್ ಚಂದ್ರ ಬೋಸರು ರಾಷ್ಟ್ರ ನಿರ್ಮಾಣದಲ್ಲಿ ಈಶಾನ್ಯ ರಾಜ್ಯಗಳ ಮಹತ್ವವನ್ನು ಮನಗಂಡಿದ್ದರು, ಅಂತೆಯೇ ನಮ್ಮ ಸರ್ಕಾರ ಸಹ ಈಶಾನ್ಯ ರಾಜ್ಯಗಳ ಮಹತ್ವವನ್ನು ಅರಿತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಅ.21 ರಂದು ನೇತಾಜಿ ಸುಭಾಷ್ ಚಂದ್ರ ಬೋಸರು ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ನ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತಾಜಿ ಬೋಸರ ನೇತೃತ್ವದಲ್ಲಿ ಆಝಾದ್ ಹಿಂದ್ ಫೌಜ್ ನ ಸಾಧನೆಗಳನ್ನು ಸ್ಮರಿಸಿದ್ದು, ಸೂರ್ಯ ಮುಳುಗದ ಸಾಮ್ರಾಜ್ಯದವರ ವಿರುದ್ಧ ನೇತಾಜಿ ಜನತೆಯನ್ನು ಒಗ್ಗೂಡಿಸಿದ್ದರು ಎಂದು ಹೇಳಿದ್ದಾರೆ. 
"ಸ್ವಾಮಿ ವಿವೇಕಾನಂದರಿಂದ ಸುಭಾಷ್ ಚಂದ್ರ ಬೋಸರು ಪ್ರೇರಣೆ ಪಡೆದಿದ್ದರು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೋರಾಟ ನಡೆಸುತಿದ್ದ ಬೋಸರು ಕಾಂಗ್ರೆಸ್ ನ  ಬದಲಾಗಿ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ್ದರು. ದಕ್ಷಿಣ ಆಫ್ರಿಕಾದ ವಿದ್ಯಾರ್ಥಿ ಚಳುವಳಿಯ ನಾಯಕರು ಬೋಸರನ್ನು ತಮ್ಮ ಹಿರೋ ಎಂದು ಪರಿಗಣಿಸಿದ್ದರೆಂದು ನೆಲ್ಸನ್ ಮಂಡೇಲಾ ಬೋಸರ ಬಗ್ಗೆ ಹೇಳಿದ್ದರು.  ಪ್ರತಿಯೊಬ್ಬರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳಿರುವ, ತನ್ನ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಇರುವ ಎಲ್ಲಾ ರಂಗಗಳಲ್ಲಿಯೂ ಬೆಳವಣಿಗೆ ಸಾಧಿಸುವ ಸಂವೃದ್ಧ  ರಾಷ್ಟ್ರದ ಕಲ್ಪನೆಯನ್ನು ಬೋಸರು ಹೊಂದಿದ್ದರು. ಸ್ವಾತಂತ್ರ್ಯಾ ನಂತರ ಭಾರತ ಸಾಕಷ್ಟು ಮುಂದೆ ಬಂದಿದೆ. ಆದರೆ ನ್ ಅವರ ಪರಿಕಲ್ಪನೆಯಲ್ಲಿದ್ದ ದೇಶವಾಗಿಲ್ಲ" ಎಂದು ಮೋದಿ ಹೇಳಿದ್ದಾರೆ. 
ನೇತಾಜಿ ಸುಭಾಷ್ ಚಂದ್ರ ಬೋಸರ ಕಲ್ಪನೆಯ ಸೇನೆಯನ್ನು ಭಾರತ ನಿರ್ಮಿಸುತ್ತಿದೆ,  ನೇತಾಜಿ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಗೊಳಿಸುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿತು. ಈಗ ನೇತಾಜಿ ಅವರ ಗೌರವಾರ್ಥ ಪ್ರಶಸ್ತಿಯೊಂದನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧನಿ ಮೋದಿ ಘೋಷಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

SCROLL FOR NEXT