ದೇಶ

ಗುರುಗ್ರಾಮ: ಅಂಗರಕ್ಷಕನಿಂದಲೇ ಗುಂಡಿನ ದಾಳಿಗೊಳಗಾಗಿದ್ದ ಜಡ್ಜ್ ಪುತ್ರ ಸಾವು

Nagaraja AB

ಗುರುಗ್ರಾಮ: ಅಂಗರಕ್ಷಕರಿಂದಲೇ ಗುಂಡಿನ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರಿಯಾಣದ ಗುರುಗ್ರಾಮದ  ನ್ಯಾಯಾಧೀಶರ ಪುತ್ರ  ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃಪಟ್ಟಿದ್ದಾನೆ.

ಅಕ್ಟೋಬರ್ 13 ರಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಕೃಷ್ಣನ್ ಕಾಂತ್  ಅವರ  ಪತ್ನಿ ರಿತೂ ಹಾಗೂ ಮಗ ಧ್ರುವ  ಶಾಪಿಂಗ್ ಮಾಲ್ ನಿಂದ ಹೊರಗೆ ಬರಬೇಕಾದರೆ ಅಂಗರಕ್ಷಕ ಮಹಿಪಾಲ್ ಸಿಂಗ್ ಗುಂಡಿನ ದಾಳಿ ನಡೆಸಿದ್ದ.ಪರಿಣಾಮಅಕ್ಟೋಬರ್ 14 ರಂದು ಮೃತಪಟ್ಟಿದ್ದರು. ಅವರ ಮಗ ಧ್ರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ನಂತರ ಮಹಿಪಾಲ್ ಸಿಂಗ್ ನನ್ನು ಬಂಧಿಸಿ  ಜೈಲಿಗೆ ಕಳುಹಿಸಲಾಗಿತ್ತು. ಮನೆಗೆ ತೆರಳಲು ರಜೆ ನೀಡದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಪತ್ನಿ ಹಾಗೂ ಪುತ್ರನ ಮೇಲೆ ಗುಂಡಿನ ದಾಳಿ ನಡೆಸಿದ್ದಾಗಿ ಆರೋಪಿ  ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದ.

 ಗುಂಡಿನ ದಾಳಿ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಚಿತ್ರೀಕರಣ ಮಾಡಿದ್ದರು. ಕೈಯಲ್ಲಿ ಗನ್ ಹಿಡಿದ ಮಹಿಪಾಲ್ ಸಿಂಗ್ ,  ರಸ್ತೆಯಲ್ಲಿ ಬಿದಿದ್ದ ಧ್ರುವನನ್ನು ಕಾರಿಗೆ ಹಾಕುತ್ತಿರುವ ದೃಶ್ಯ ಅದರಲ್ಲಿ ಸೆರೆಯಾಗಿತ್ತು.

SCROLL FOR NEXT