ದೇಶ

ಹಾಂಗ್ ಕಾಂಗ್ ನಲ್ಲಿ ನೀರಾವ್ ಮೋದಿಗೆ ಸೇರಿದ 255 ಕೋಟಿ ರೂ. ಮೌಲ್ಯದ ಸಂಪತ್ತು ಇಡಿ ವಶಕ್ಕೆ!

Nagaraja AB

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಹಾಂಗ್ ಕಾಂಗ್ ನಲ್ಲಿ ನೀರಾವ್  ಮೋದಿಗೆ ಸೇರಿದ 255 ಕೋಟಿ ರೂ. ಮೌಲ್ಯದ  ಚಿನ್ನಾಭರಣವನ್ನು  ವಶಪಡಿಸಿಕೊಳ್ಳಲಾಗುವುದು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಈ ಸಂಪತ್ತು ವಶಪಡಿಸಿಕೊಳ್ಳಲು ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿದೆ ಎಂದು ಇಡಿ ತಿಳಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಕೇಸ್ ದಾಖಲಾದ ನಂತರ ದುಬೈ ಮೂಲದ  ಕಂಪನಿಯೊಂದರ ಮೂಲಕ  ಭಾರೀ ಮೌಲ್ಯದ ಚಿನ್ನಾಭರಣವನ್ನು  ಹಾಂಗ್ ಕಾಂಗ್ ಗೆ ರಪ್ತು ಮಾಡಲಾಗಿತ್ತು.

 ವಿಚಾರಣೆ ವೇಳೆಯಲ್ಲಿ ಚಿನ್ನಾಭರಣ ಸಾಗಿಸಲಾದ ಹಡಗು, ಹಡಗುಗಳ ಮಾಲೀಕರು, ಹಾಗೂ ಒಟ್ಟಾರೇ ಚಿನ್ನಾಭರಣಗಳ ಮೌಲ್ಯ  ಬಗ್ಗೆ ಮಾಹಿತಿ ಪಡೆದ ನಂತರ 34.97 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ  ಸಂಪತ್ತನ್ನು  ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ ಎಂದು ಇಡಿ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಈ ಸಂಪತ್ತು ವಶಪಡಿಸಿಕೊಳ್ಳಲು  ನ್ಯಾಯಾಲಯ ಅಧಿಕೃತವಾಗಿ ಹೊರಡಿಸಿರುವ ಆದೇಶದ ಪ್ರತಿಯನ್ನು ಶೀಘ್ರದಲ್ಲಿಯೇ ಹಾಂಗ್ ಕಾಂಗ್ ಗೆ ರವಾನಿಸಲಾಗುವುದು ಎಂದು ಜಾರಿನಿರ್ದೇಶನಾಲಯ ಹೇಳಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ವಂಚಿಸಿ ಕಳೆದ ವರ್ಷದಿಂದ  ಇಂಗ್ಲೆಂಡ್ ನಲ್ಲಿ ತಲೆ ಮರೆಸಿಕೊಂಡಿರುವ ನೀರವ್ ಮೋದಿ  ಬಂಧನಕ್ಕಾಗಿ ಇಂಟರ್ ಪೋಲ್  ಆದೇಶ ಹೊರಡಿಸಿದೆ.

SCROLL FOR NEXT