ನವದೆಹಲಿ: "ಮಧ್ಯರಾತ್ರಿ 2 ಗಂಟೆಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಬದಲಿಸಿರುವುದು ಸಂವಿಧಾನಕ್ಕೆ ಎಸಗಿದ ಅಪಚಾರ, ಮುಖ್ಯ ನ್ಯಾಯಾಧೀಶರಿಗೆ ಮಾಡಿದ ಅವಮಾನ ಹಾಗೂ ದೇಶದ ಜನತೆಗೆ ಮಾಡಿದ ದ್ರೋಹವಾಗಿದೆ." ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಯಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾದ್ಯಮಗಳೊಡನೆ ರಾಹುಲ್ ಮಾತನಾಡಿದ್ದಾರೆ.
ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವುದು ಹಾಗೂ ವಜಾಗೊಳಿಸುವುವ ಕಾರ್ಯ ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ವಿರೋಧ ಪಕ್ಷದ ನಾಯಕರಿರುವ ಮೂವರ ಸಮಿತಿಯ ಕಾರ್ಯವಾಗಿದೆ.ಆದರೆ ಮೋದಿ ನೇತೃತ್ವದ ಸರ್ಕಾರ ರಾತ್ರೋರಾತ್ರಿ ಸಿಬಿಐ ನಿರ್ದೇಶಕರನ್ನು ಬದಲಿಸಿದೆ ಇದು ಕಾನೂನುಬಾಹಿರ ಕೆಲಸವಾಗಿದ್ದು ಅಪರಾಧವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ಅವರು ಭ್ರಷ್ಠಾಚಾರದಲ್ಲಿ ತೊಡಗಿದ್ದರು. ಅವರು ಸಿಕ್ಕಿಹಾಕಿಕೊಳ್ಳಬಹುದು ಎನ್ನುವ ಭಯದಿಂಡಲೇ ಪ್ರಧಾನಿ ರಾತ್ರಿ ಎರಡಕ್ಕೆ ಈ ಬದಲಾವಣೆ ಮಾಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗೆ ಸಿಬಿಐನ ಆಡಳಿತವನ್ನು ನೀಡಲಾಗಿದೆ ಏಕೆ? ಅವರನ್ನು ಪ್ರಧಾನಿ ನಿಯಂತ್ರಿಸಬಹುದು, ಅಲ್ಲದೆ ಇಂತಹವರು ರಾಫೆಲ್ ಒಪ್ಪಂದದ ಕುರಿತು ಯಾವ ತನಿಖೆ ನಡೆಸುವುದಿಲ್ಲ ಎನ್ನುವುದು ಸ್ಪಷ್ಟ." ಅವರು ಹೇಳಿದ್ದಾರೆ.