ನ.1-10 ವರೆಗೆ ಎಲೆಕ್ಟ್ರಾಲ್ ಬಾಂಡ್ ಮಾರಾಟ!
ನವದೆಹಲಿ: ನ.1-10 ವರೆಗೆ ಎಲೆಕ್ಟ್ರಾಲ್ ಬಾಂಡ್ ಮಾರಾಟ ಪ್ರಾರಂಭಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೋಟಿಫೈ ಮಾಡಲಾಗಿರುವ ಶಾಖೆಗಳಲ್ಲಿ ನ.1-10 ವರೆಗೆ ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಎಲೆಕ್ಟ್ರಾಲ್ ಬಾಂಡ್ ಮಾರಾಟವಾದ ದಿನದಿಂದ ಖರೀದಿಸಿರುವ ವ್ಯಕ್ತಿ ಅದನ್ನು ಯಾವುದೇ ಪಕ್ಷಕ್ಕೆ 15 ದಿನಗಳ ಒಳಗೆ ಅದನ್ನು ನೀಡಬೇಕು 15 ದಿನಗಳ ನಂತರ ಎಲೆಕ್ಟ್ರಾಲ್ ಬಾಂಡ್ ಮಾನ್ಯತೆ ಕಳೆದುಕೊಳ್ಳಲಿದ್ದು, 15 ದಿನಗಳ ನಂತರ ಯಾವುದೇ ರಾಜಕೀಯ ಪಕ್ಷಗಳು ಅದರಿಂದ ಹಣ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹಣಕಾಸು ಇಲಾಖೆ ಹೇಳಿದೆ.
ರಾಜಕೀಯ ಪಕ್ಷಗಳು ದೇಣಿಗೆ ಸ್ವೀಕರಿಸುವ ಕಾರ್ಯಕ್ಕೆ ಪಾರದರ್ಶಕತೆ ತರಲು ಮತ್ತು ಆ ದೇಣಿಗೆಗೆ ಜವಾಬ್ದಾರಿ ನಿಗದಿಪಡಿಸಲು ಬಜೆಟ್‌ನಲ್ಲಿ ಯೋಚಿಸಿ ಎಲೆಕ್ಟ್ರಾಲ್ ಬಾಂಡ್ ಜಾರಿಗೊಳಿಸುವ ಬಗ್ಗೆ ಘೋಷಿಸಲಾಗಿತ್ತು. ಈ ಪ್ರಕಾರ ಇತ್ತೀಚೆಗಷ್ಟೇ ನಡೆದಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ (ವಿಧಾನಸಭೆ, ಲೋಕಸಭೆ) ಕನಿಷ್ಟ ಶೇ.1 ರಷ್ಟು ಮತ ಪಡೆದಿರುವ ರಾಜಕೀಯ ಪಕ್ಷಗಳು ಎಲೆಕ್ಟ್ರಾಲ್ ಬಾಂಡ್ ಪಡೆಯುವುದಕ್ಕೆ ಅರ್ಹತೆ ಹೊಂದಿರಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics