ದೇಶ

ಲಂಕಾ ರಾಜಕೀಯ ಬಿಕ್ಕಟ್ಟು: ಸಂಸತ್ ಕಲಾಪ ರದ್ದುಗೊಳಿಸಿದ ಅಧ್ಯಕ್ಷ ಸಿರಿಸೇನಾ

Lingaraj Badiger
ಕೊಲಂಬೊ: ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸಂಸತ್ ತುರ್ತು ಕಲಾಪವನ್ನು ನವೆಂಬರ್​ 16ರ ವರೆಗೆ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಸಿರಿಸೇನಾ ಅವರು ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಪ್ರಧಾನಿ ರಾನಿಲ್​ ವಿಕ್ರಮಸಿಂಘೆಯನ್ನು ಪದಚ್ಯುತಿಗೊಳಿಸಿ, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿ ಸ್ಥಾನಕ್ಕೆ ನೇಮಕ ಮಾಡಿದ್ದರು. ಇದರ ಬೆನ್ನಲ್ಲೇ ಅಧ್ಯಕ್ಷರಿಂದ ಪದಚ್ಯುತಿಗೊಂಡ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ತಮ್ಮ ಬಹುಮತ ಸಾಬೀತುಪಡಿಸುವ ಸಲುವಾಗಿ ಸಂಸತ್ತಿನ ತುರ್ತು ಅಧಿವೇಶನ ಕರೆದಿದ್ದರು. ಆದರೆ ಮಹಿಂದಾ ರಾಜಪಕ್ಸೆ ಹೆಚ್ಚು ಸಮಯ ನೀಡುವ ಉದ್ದೇಶದಿಂದ ಸಂಸತ್ ಕಲಾಪ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
2019ರ ಆಯವ್ಯಯ ಅನಾವರಣಗೊಳಿಸಲು ನವೆಂಬರ್​ 5ರಂದು ಪಾರ್ಲಿಮೆಂಟ್​ ಸಭೆ ಇತ್ತು. ಆದರೆ, ಈಗ ನ.16ರ ವರೆಗೆ ಸಂಸತ್ತು ಸ್ಥಗಿತಗೊಂಡಿರುವ ಕಾರಣ ಸರ್ಕಾರದ ಹಣಕಾಸು ವ್ಯವಹಾರದ ಮೇಲೆ ಪ್ರಭಾವ ಬೀರಲಿದ್ದು, ದೇಶದ ಆರ್ಥಿಕ ಸ್ಥಿತಿಯೂ ಏರುಪೇರಾಗಲಿದೆ ಎನ್ನಲಾಗಿದೆ.
ಬಿಗಡಾಯಿಸಿರುವ ಪರಿಸ್ಥಿತಿ ಶೀಘ್ರವೇ ಸರಿಯಾಗಲಿದ್ದು, ಅಲ್ಲಿಯವರೆಗೆ ಶಾಂತಿ, ಸಂಯಮದಿಂದ ಇರಬೇಕು ಎಂದು ಸ್ಪೀಕರ್​ ಕರು ಜಯಸೂರ್ಯ ಹೇಳಿದ್ದಾರೆ.
SCROLL FOR NEXT