ಸರ್ಕಾರದ ಸಹಾಯ ಪಡೆದು ಶೌಚಾಲಯ ನಿರ್ಮಿಸದ 46 ಮಂದಿ ವಿರುದ್ಧ ಎಫ್ಐಆರ್
ಸರ್ಕಾರದಿಂದ ಆರ್ಥಿಕ ಸಹಾಯ ಪಡೆದೂ ಶೌಚಾಲಯ ನಿರ್ಮಿಸದ 46 ಮಂದಿ ವಿರುದ್ಧ...
ಸಂಭಲ್(ಉತ್ತರ ಪ್ರದೇಶ): ಸರ್ಕಾರದಿಂದ ಆರ್ಥಿಕ ಸಹಾಯ ಪಡೆದೂ ಶೌಚಾಲಯ ನಿರ್ಮಿಸದ 46 ಮಂದಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರದಿಂದ ಆರ್ಥಿಕ ಸಹಾಯ ಪಡೆದಿದ್ದ 46 ಮಂದಿ ಶೌಚಾಲಯ ನಿರ್ಮಿಸದೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸರ್ಕಾರದ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಸ್ವಚ್ಛ ಭಾರತ ಮಿಷನ್ ಅಡಿ ಶೌಚಾಲಯ ನಿರ್ಮಾಣಕ್ಕಾಗಿ ತಲಾ 4 ಸಾವಿರ ರುಪಾಯಿ ಆರ್ಥಿಕ ನೆರವು ಪಡೆದಿದ್ದರು. ಕಾರ್ಯಕಾರಿ ಅಧಿಕಾರಿ ಚಂದೌಸಿ ಅಮಿತಾ ವರುಣ್ ಅವರು ಶೌಚಾಲಯ ನಿರ್ಮಾಣದ ಕುರಿತು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಈ 46 ಮಂದಿ ಶೌಚಾಲಯ ನಿರ್ಮಿಸದಿರುವುದು ಪತ್ತೆಯಾಗಿತ್ತು. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.