ಕಾಶ್ಮೀರ ಹಿಂದೂಗಳ ಆಳ್ವಿಕೆಯಲ್ಲಿ ಶಾಂತಿಯಿಂದಿತ್ತು, ಇತಿಹಾಸದಿಂದ ಕಲಿಯಬೇಕಾಗಿದೆ: ಯೋಗಿ ಆದಿತ್ಯನಾಥ್
ಕಾಶ್ಮೀರ ಹಿಂದೂಗಳ ಆಳ್ವಿಕೆಯಲ್ಲಿ ಶಾಂತಿಯಿಂದ ಇತ್ತು, ಇತಿಹಾಸದಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶ: ಕಾಶ್ಮೀರ ಹಿಂದೂಗಳ ಆಳ್ವಿಕೆಯಲ್ಲಿ ಶಾಂತಿಯಿಂದ ಇತ್ತು, ಇತಿಹಾಸದಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಬಿಜೆಪಿಯ ಸಿಖ್ ಸಮಾಗಮ್ ಸಮಾರಂಭದಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಹಿಂದೂ ಸಮುದಾಯದ ಪತನದಿಂದ ಕಾಶ್ಮೀರದಲ್ಲಿ ಹಿಂದೂಗಳ ಆಡಿಳಿತ ಕೊನೆಯಾಗುವಂತೆ ಮಾಡಿತು. ಕಾಶ್ಮೀರ ಸಿಖ್ ಹಾಗೂ ಹಿಂದೂಗಳ ಆಡಳಿತದಲ್ಲಿದ್ದಾಗ ಶಾಂತಿ ನೆಲೆಸಿತ್ತು ಎಂದು ಆದಿತ್ಯನಾಥ್ ಹೇಳಿದ್ದಾರೆ.
ಇಂದು ಕಾಶ್ಮೀರದ ಸ್ಥಿತಿ ಏನಾಗಿದೆ? ಕಾಶ್ಮೀರದಲ್ಲಿರುವವರು ಸುರಕ್ಷಿತವಾಗಿದ್ದೀವಿ ಎಂದು ಹೇಳಲು ಸಾಧ್ಯವಿದೆಯೇ? ನಾವು ಇತಿಹಾಸದಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಶ್ಮೀರದ ರಾಜಕಾರಣಿಗಳ ಬಗ್ಗೆಯೂ ಟೀಕಾ ಪ್ರಹಾರ ನಡೆಸಿರುವ ಯೋಗಿ ಆದಿತ್ಯನಾಥ್, ಕಾಶ್ಮೀರದ ರಾಜಕಾರಣಿಗಳು ಹುರಿಯತ್ ಕಾನ್ಫರೆನ್ಸ್ ನ ಅನುಮತಿ ಇಲ್ಲದೇ, ಶೌಚಾಲಯಕ್ಕೂ ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ಲೇವಡಿ ಮಾಡಿದ್ದಾರೆ.