ಎಐಎಡಿಎಂಕೆ ನಾಯಕರಾದ ಪನ್ನೀರ್ ಸೆಲ್ವಂ, ಪಳನಿಸ್ವಾಮಿ
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ಸ್ಮಾರಕದ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದರೆ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಎಐಎಡಿಎಂಕೆ ಅನರ್ಹಗೊಂಡ 18 ಶಾಸಕರಿಗೆ ಹೇಳಿದೆ.
2016ರಲ್ಲಿ ಗೆದ್ದ ಈ 18 ಶಾಸಕರ ಗೆಲುವನ್ನು ಜಯಲಲಿತಾ ಅವರಿಗೆ ಅರ್ಪಿಸಿ, ಬಂಡಾಯ ನಾಯಕ ಟಿಟಿವಿ ದಿನಕರನ್ ಜೊತೆ ಗುರುತಿಸಿಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪ ಪಟ್ಟುಕೊಂಡು ಪಕ್ಷ ಸಂಘಟನೆಗೆ ಮರಳುವಂತೆ ಎಐಎಡಿಎಂಕೆ ಮುಖವಾಣಿ ನಮಧು ಅಮ್ಮದಲ್ಲಿ ಸೂಚಿಸಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಎಐಎಡಿಎಂಕೆ 18 ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಕ್ರಮವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಇದರಿಂದಾಗಿ ಟಿಟಿವಿ ದಿನಕರನ್ ಗುಂಪಿಗೆ ಭಾರೀ ಹಿನ್ನಡೆ ಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics