ದೇಶ

ಮಾಲೆಗಾಂವ್ ಸ್ಪೋಟ: ಪುರೋಹಿತ್, ಸಾದ್ವಿ ಮತ್ತು ಐವರ ವಿರುದ್ಧ ದೋಷಾರೋಪ ಪಟ್ಟಿ

Raghavendra Adiga
ನವದೆಹಲಿ: 2008 ರ ಮಾಲೆಗಾಂವ್ ಬಾಂಬ್ ಸ್ಫೋಟದ ಪರಕರಣದಲ್ಲಿ ಬಾಗಿಯಾದ ಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಐವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (ಯುಎಪಿಎ) ಮತ್ತು ವಿವಿಧ ಐಪಿಸಿ ಸೆಕ್ಷನ್ ಗಳಡಿಯಲ್ಲಿ ದೋಷಾರೋಪವನ್ನು ರದ್ದುಗೊಳಿಸಲು ವಿಶೇಷ ನ್ಯಾಯಾಲಯವು ನಿರಾಕರಿಸಿದೆ.
ವಿಶೇಷ ನ್ಯಾಶನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಪದಾಲ್ಕರ್ ಆರೋಪಿಗಳ ವಿರುದ್ಧದ ದೋಷಾರೋಪವನ್ನು ರದುಗೊಳಿಸಲು ನಿರಾಕರಿಸಿದ್ದಾರೆ.ಅಲ್ಲದೆ ಪುರೋಹಿತ್ ಸೇರಿ ಎಲ್ಲಾ ಏಳು ಮಂದಿ ಆರೊಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿ ತನಿಖೆ ನಡೆಸಬೇಕೆಂದು ಹೇಳಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 2ರಂದು ನಡೆಯಲಿದೆ.
ಪುರೋಹಿತ್ ಮತ್ತು ಸಾಧ್ವಿ ಅವರಲ್ಲದೆ ಮೇಜರ್(ನಿವೃತ್ತ)ರಮೇಶ್ ಉಪಾಧ್ಯಾಯ, ಅಜಯ್ ರಹೀರ್ಕರ್, ಸುಧಾಕರ್ ದ್ವಿವೇದಿ, ಸುಧಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಅವರುಗಳು ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸಿಲುಕಿದ್ದಾರೆ.
ಪ್ರಕರಣದ ಪ್ರಮುಖ ಆರೊಪಿ ಪುರೋಹಿತ್ ತಮ್ಮ ವಿರುದ್ಧದ ದೋಷಾರೋಪಣೆ ಸಲ್ಲಿಕೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯಪುರೋಹಿತ್ ಅವರ ಮನವಿಯನ್ನು ತಿರಸ್ಕರಿಸಿದೆ.
ಉತ್ತರ ಮಹಾರಾಷ್ಟ್ರದಲ್ಲಿ 2008 ರ ಸೆಪ್ಟೆಂಬರ್ 29 ರಂದು ಮಾಲೆಗಾಂವ್ ನಲ್ಲಿ ಮಸೀದಿ ಬಳಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
SCROLL FOR NEXT