ವಿತ್ತ ಸಚಿವ ಅರುಣ್ ಜೇಟ್ಲಿ 
ದೇಶ

ವಿಶ್ವಬ್ಯಾಂಕ್ ಸುಲಭ ವ್ಯವಹಾರ ಪಟ್ಟಿಯಲ್ಲಿ ಭಾರತ 50ನೇ ಸ್ಥಾನಕ್ಕೇರಬಹುದು- ಅರುಣ್ ಜೇಟ್ಲಿ

ಒಂದು ವೇಳೆ ಸಮಯಕ್ಕೆ ಸರಿಯಾದ ರೀತಿಯಲ್ಲಿ ರಿಯಲ್ ಎಸ್ಟೇಟ್ ನೋಂದಣಿ, ವ್ಯವಹಾರದ ಪ್ರಾರಂಭ ಮತ್ತು ಗುತ್ತಿಗೆ ಕ್ರಮದಲ್ಲಿ ಪ್ರಗತಿಯಾದರೆ ವಿಶ್ವ ಬ್ಯಾಂಕ್ ಸುಲಭ ವ್ಯವಾಹಾರ ಪಟ್ಟಿಯಲ್ಲಿ ಭಾರತ 50 ನೇ ಸ್ಥಾನಕ್ಕೇರಬಹುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ: ಒಂದು ವೇಳೆ  ಸಮಯಕ್ಕೆ ಸರಿಯಾದ ರೀತಿಯಲ್ಲಿ ರಿಯಲ್ ಎಸ್ಟೇಟ್  ನೋಂದಣಿ, ವ್ಯವಹಾರದ ಪ್ರಾರಂಭ ಮತ್ತು ಗುತ್ತಿಗೆ ಕ್ರಮದಲ್ಲಿ  ಪ್ರಗತಿಯಾದರೆ ವಿಶ್ವ ಬ್ಯಾಂಕ್ ಸುಲಭ ವ್ಯವಾಹಾರ ಪಟ್ಟಿಯಲ್ಲಿ ಭಾರತ 50 ನೇ ಸ್ಥಾನಕ್ಕೇರಬಹುದು ಎಂದು ವಿತ್ತ ಸಚಿವ ಅರುಣ್    ಜೇಟ್ಲಿ ಹೇಳಿದ್ದಾರೆ.

ವಿಶ್ವಬ್ಯಾಂಕ್  ಸುಲಭ  ವ್ಯವಹಾರ ಪಟ್ಟಿ-2019 ಬಿಡುಗಡೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ನೋಂದಣಿ,  ವ್ಯವಹಾರ ಆರಂಭ, ತೆರಿಗೆ ಹಾಗೂ ಗುತ್ತಿಗೆ ಪ್ರದೇಶಗಳ ಅತಿಕ್ರಮದಲ್ಲಿ ಪ್ರಗತಿಯಾಗಬೇಕಾಗಿದೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರವನ್ನು ಕಡಿಮೆ ಮಾಡಲಾಗಿದೆ.ಅಲ್ಲದೇ ಆರ್ಥಿಕ ಕ್ಷೇತ್ರದಲ್ಲಿ ತಂದ ಸಾಕಷ್ಟು ಸುಧಾರಣೆಯಿಂದಾಗಿ ವಿಶ್ವ ಬ್ಯಾಂಕ್ ಸುಲಭ ವ್ಯವಹಾರ ಪಟ್ಟಿಯಲ್ಲಿ 77 ನೇ ಸ್ಥಾನಕ್ಕೇರುವಂತಾಗಿದೆ ಎಂದು  ಅರುಣ್ ಜೇಟ್ಲಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ 2019ರ ನಂತರ ಮತ್ತೆ ಪ್ರಧಾನಿಯಾದ ಕೂಡಲೇ  ಮತ್ತಷ್ಟು ಸುಧಾರಣೆ ತರುವ ಮೂಲಕ ವಿಶ್ವ ಬ್ಯಾಂಕ್ ಸುಲಭ ವ್ಯವಹಾರ ಪಟ್ಟಿಯಲ್ಲಿ 50 ನೇ ಸ್ಥಾನಕ್ಕೇರಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!