ದೇಶ

ಬೇಕಾಗಿರೋದು 126 ಜೆಟ್ ಗಳು ಆದರೆ ಖರೀದಿಸುತ್ತಿರುವುದು 36 ರಾಫೆಲ್ ಜೆಟ್ ಗಳನ್ನಷ್ಟೇ ಏಕೆ: ಕಾಂಗ್ರೆಸ್ ನ ಹೊಸ ಆಕ್ಷೇಪ

Srinivas Rao BV
ರಾಫೆಲ್ ಜೆಟ್ ಖರೀದಿ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ ಈಗ ದೇಶಕ್ಕೆ ಬೇಕಾಗಿದ್ದದ್ದು 126 ಫೈಟರ್ ಜೆಟ್ ಗಳು ಆದರೆ ಕೇವಲ 36 ರನ್ನಷ್ಟೇ ಏಕೆ ಖರೀದಿಸಲಾಗಿದೆ? ಎಂದು ಪ್ರಶ್ನಿಸಿದೆ. 
ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕ ಚತುರ್ವೇದಿ ಈ ಬಗ್ಗೆ ಪ್ರಶ್ನೆ ಮಾಡಿದ್ದು, ಕೇಂದ್ರ ಸರ್ಕಾರ ಖರೀದಿಸಿರುವ ಎಲ್ಲಾ ಫೈಟರ್ ಜೆಟ್ ಗಳನ್ನು ಒಂದೇ ಬಾರಿಗೆ ಹಸ್ತಾಂತರಿಸಲು ಫ್ರಾನ್ಸ್ ಸಂಸ್ಥೆಗೆ ಕೇಳಿಲ್ಲ.  ಮೊದಲು 2019 ರಲ್ಲಿ ಒಂದಷ್ಟು ಏರ್ ಕ್ರಾಫ್ಟ್ ಗಳು ಸಿಗಲಿವೆ ನಂತರ 2022 ರಲ್ಲಿ ಎರಡನೇ ಕಂತಿನಲ್ಲಿ ಫೈಟರ್ ಜೆಟ್ ಗಳು ಭಾರತದ ಕೈಸೇರಲಿವೆ, ಒಂದು ವೇಳೆ ತುರ್ತು ಅಗತ್ಯವಿದ್ದಿದ್ದರೆ 2019 ರ ವೇಳೆಗೇ ಎಲ್ಲಾ ಜೆಟ್ ಗಳೂ ಒಂದೇ ಬಾರಿಗೆ ಸಿಗಬೇಕಿತ್ತು ಎಂದು ಹೇಳಿದೆ. 
ರಾಫೆಲ್ ಜೆಟ್ ಒಪ್ಪಂದದಲ್ಲಿ ಹಗರಣ ನಡೆದಿಲ್ಲವಾದರೆ ಕೇಂದ್ರ ಸರ್ಕಾರ ಯಾಕೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಲಿಲ್ಲ ಎಂದು ಪ್ರಶ್ನಿಸಿದ್ದಾರೆ.  ದೇಶಕ್ಕೆ ಒಟ್ಟಾರೆ ಅಗತ್ಯವಿದ್ದದ್ದು 126 ಏರ್ ಕ್ರಾಫ್ಟ್ ಗಳು ಆದರೆ ಎನ್ ಡಿಎ ಸರ್ಕಾರ ಕೇವಲ 36 ಯುದ್ಧ ವಿಮಾನಗಳನ್ನು ಖರೀದಿಸಿದ್ದು ವಿಚಿತ್ರವಾಗಿದೆ. ಮಿಲಿಯನೇರ್ ಸ್ನೇಹಿತನಿಗೆ ಅನುಕೂಲ ಮಾಡಲು ಹೋಗಿ ಎನ್ ಡಿಎ ಸರ್ಕಾರ ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 
SCROLL FOR NEXT