ನವದೆಹಲಿ: ಸ್ವಯಂಘೋಷಿತ ದೇವ ಮಾನವ ನಬ್ಬೆ ದಾಸ್ ಅತ್ಯಾಚಾರ ಆರೋಪದ ಮೇಲೆ ದೆಹಲಿ ಪೋಲೀಸರಿಂದ ಬಂಧಿತನಾಗಿದ್ದಾನೆ.
ಪೋಸ್ಕೋ ಕಾಯ್ದೆ ಅಡಿಯಲ್ಲಿ ಭಾನುವಾರ ಈತನನ್ನು ಬಂಧಿಸಲಾಗಿದೆ, ಆ.30ರಂದು ಮಹಿಳೆಯೊಬ್ಬರು ನಬ್ಬೆ ದಾಸ್ ಮೇಲೆ ದೂರಿತ್ತಿದ್ದರು.
ಆ. 17ರಂದು ಮಹಿಳೆಯ ಸೋದರ ಸೊಸೆಗೆ ಲೈಂಗಿಕ ಕಿರುಕುಳ ನೀಡಿದ್ದನು. ಇದನ್ನು ಬಹಿರಂಗಪಡಿಸದಂತೆ ಎಚ್ಚರಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದನೆಂದು ಮಹಿಳೆ ದುರಿನಲ್ಲಿ ಹೇಳಿದ್ದಾರೆ.
ಸಧ್ಯ ಆರೋಪಿ ದೇವ ಮಾನವನನ್ನು ಬಂಧಿಸಿದ ಪೋಲೀಸರು ತನಿಖೆ ನಡೆಸುವ ಮೂಲಕ ಹೆಚ್ಚಿನ ವಿವರ ಕಲೆಹಾಕುತ್ತಿದ್ದಾರೆ.