ದೇಶ

ವಿವಾದದ ನಡುವೆಯೇ ಐಎಎಫ್ ಪೈಲಟ್ ಗಳಿಗೆ ರಾಫೆಲ್ ಯುದ್ಧ ವಿಮಾನ ತರಬೇತಿ

Lingaraj Badiger
ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದದ ನಡುವೆಯೇ ಮೂರು ರಾಫೆಲ್ ಯುದ್ಧ ವಿಮಾನಗಳು ಭಾರತೀಯ ವಾಯು ಪಡೆಯೊಂದಿಗೆ ಗ್ವಾಲಿಯರ್ ಮತ್ತು ಆಗ್ರದಲ್ಲಿ ತರಬೇತಿಯಲ್ಲಿ ತೊಡಗಿವೆ.
ನಾಲ್ಕು ದಿನಗಳ ಭೇಟಿಗಾಗಿ ಸುಮಾರು 100 ಫ್ರೆಂಚ್ ಯುದ್ಧ ವಿಮಾನ ಪೈಲಟ್ ಗಳು, ಒಂದು ಅಟ್ಲಾಸ್ ಎ-4000ಎ ಸೇನಾ ಸಾರಿಗೆ ವಿಮಾನ, ಒಂದು ಸಿ-135 ಇಂಧನ ತುಂಬುವ ವಿಮಾನ ಹಾಗೂ ಏರ್ ಬಸ್ ಎ 310 ಕಾರ್ಗೋ ವಿಮಾನ  ಭಾರತಕ್ಕೆ ಆಗಮಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಎಎಫ್ ನ ಒಂದು ಬ್ಯಾಚ್ ನ ಪೈಲಟ್ ಗಳಿಗೆ ರಾಫೆಲ್ ಯುದ್ಧ ವಿಮಾನದ ತರಬೇತಿ ಪಡೆಯುವ ಅವಕಾಶ ಸಿಕ್ಕಿದೆ. ಇಂಡೋನೆಷಿಯಾ, ಫ್ರೆಂಚ್ ವಿಮಾನ ಮಲೇಷ್ಯಾ, ವಿಯಟ್ನಾಂ ಹಾಗೂ ಸಿಂಗಾಪುರ ಭೇಟಿಯ ನಂತರ ಶನಿವಾರ ಭಾರತಕ್ಕೆ ಆಗಮಿಸಿದೆ ಎಂದರು ಅವರು ಹೇಳಿದ್ದಾರೆ.
ಭಾರತ ಸರ್ಕಾರ ಸೆಪ್ಟೆಂಬರ್ 2016ರಲ್ಲಿ 58 ಸಾವಿರ ಕೋಟಿ ರುಪಾಯಿ ಮೌಲ್ಯದ 36 ರಾಫೆಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಎರಡು ಸರ್ಕಾರಗಳ ನಡುವಿನ ಈ ನೇರ ವಹಿವಾಟು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಂತಿಮಗೊಂಡಿತ್ತು. ಆದರೆ ರಾಫೆಲ್ ಖರೀದಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸುತ್ತಿದ್ದು, ಈ ಹಗರಣವನ್ನು ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದೆ.
SCROLL FOR NEXT