ದೇಶ

ಆಟೋ ರಿಕ್ಷಾಗಿಂತ ವಿಮಾನಯಾನ ದರವೇ ಅಗ್ಗ: ಸಚಿವ ಜಯಂತ್ ಸಿನ್ಹಾ

Manjula VN
ನವದೆಹಲಿ: ವಿಮಾನ ಪ್ರಯಾಣ ದರವು ಆಟೋ ಪ್ರಯಾಣ ದರಕ್ಕಿಂತ ಅಗ್ಗ ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರು ಮಂಗಳವಾರ ಹೇಳಿದ್ದಾರೆ. 
ಗೋರಖ್ಪುರ ವಿಮಾನ ನಿಲ್ದಾಣದ ನಿರ್ಮಾಣಗೊಂಡಿರುವ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಅವರು, ಆಟೋ ಪ್ರಯಾಣ ದರಕ್ಕಿಂತಲೂ ವಿಮಾನ ಪ್ರಮಾಣ ದರದ ಅಗ್ಗವಾಗಿದೆ. ಇದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಇಬ್ಬರು ಪ್ರಯಾಣಿಕರು ಜೊತೆಗೂಡಿ ಆಟೋ ಹತ್ತುತ್ತಾರೆ ಎಂದುಕೊಳ್ಳೋಣ. ಆಟೋದಲ್ಲಿ ಕಿ.ಮೀಗೆ ಹತ್ತು ರುಪಾಗಿ ಆಗುವ ದರವನ್ನು ಅವರು ಹಂಚಿಕೊಂಡಾಗ ತಲಾ ರೂ.5 ಆಗುತ್ತದೆ. ಆದರೆ, ನೀವು ವಿಮಾನದಲ್ಲಿ ಪ್ರಯಾಣಿಸುವಾಗ ತಲಾ ಕಿ.ಮೀ. ಪ್ರಯಾಣದ ದರ ಕೇವರ ರೂ.4 ಆಗುತ್ತದೆ ಎಂದು ಹೇಳಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ವಿಮಾನಯಾನ ವಲಯ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ವಿಮಾನದಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಕೂಡ ಹೆಚ್ಚಾಗಿದೆ. 2013ರಲ್ಲಿ 6 ಕೋಟಿ ಜನರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೀಗ ಇದರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ದೇಶದಲ್ಲಿರುವ 12 ಕೋಟಿಗೂ ಹೆಚ್ಚು ಜನರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ಹಿಂದೆ ದೇಶದಲ್ಲಿ 75 ವಿಮಾನ ನಿಲ್ದಾಣಗಳಿದ್ದವು. ಇದೀಗ ಇದರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. 
SCROLL FOR NEXT