ಸಾಂದರ್ಭಿಕ ಚಿತ್ರ 
ದೇಶ

ಉಗ್ರ ಸಂಘಟನೆ ಸೇರಿದ ಎಂಬಿಎ ಪದವೀಧರ: ಮಗನ ಮರಳವಿಕೆಗಾಗಿ ಕಾಯುತ್ತಿರುವ ಕುಟುಂಬ

ಹಿಂಸೆಯ ಹಾದಿಯನ್ನು ಬಿಟ್ಟು ವಾಪಸ್ ಬರುವಂತೆ ಉಗ್ರ ಸಂಘಟನೆ ಸೇರಿರುವ ಮಗನಿಗೆ ಜಮ್ಮು ಕಾಶ್ಮೀರದ ದೊಡಾ ಜಿಲ್ಲೆಯ ಕುಟುಂಬವೊಂದು ಮಗನಿಗೆ ..

ಜಮ್ಮು ಕಾಶ್ಮೀರ: ಹಿಂಸೆಯ ಹಾದಿಯನ್ನು ಬಿಟ್ಟು ವಾಪಸ್ ಬರುವಂತೆ ಉಗ್ರ ಸಂಘಟನೆ ಸೇರಿರುವ ಮಗನಿಗೆ  ಜಮ್ಮು  ಕಾಶ್ಮೀರದ ದೊಡಾ ಜಿಲ್ಲೆಯ ಕುಟುಂಬವೊಂದು ಮಗನಿಗೆ ಮನವಿ ಮಾಡಿದೆ.
ಹರೂನ್ ಅಬ್ಬಾಸ್ ವನಿ ಉಗ್ರ ಸಂಘಟನೆ ಸೇರಿರುವ ಯುವಕ.  ಕತ್ರಾ ವಿವಿಯ ಎಂಬಿಎ ಪದವೀಧರನಾಗಿರುವ ಈತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಸೆಪ್ಟಂಬರ್ 1 ರಂದು ಹಿಜ್ಬುಲ್ ಮುಜಾಹಿದ್ದೀನ್  ಉಗ್ರ ಸಂಘಟನೆ ಸೇರಿದ್ದಾನೆ, ವನಿ  ಏಕೆ-47  ರೈಫಲ್ ಹಿಡಿದಿರುವ ಫೋಟೋವನ್ನು  ಆತನ ಕುಟುಂಬಸ್ಥರು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದಾರೆ, ಇದನ್ನು ನೋಡಿ  ಕುಟುಂಬಸ್ಥರು ಆಘಾತಗೊಂಡಿದ್ದಾರೆ.
ವನಿ ಬ್ರಿಲಿಯಂಟ್ ವಿದ್ಯಾರ್ಥಿ, ಕತ್ರಾ ವಿವಿಯಲ್ಲಿ ಎಂಬಿಎ ಪದವಿ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಆತನ ಫೋಟೋ ನೋಡಿ ನಾವು ಆಘಾತಗೊಂಡಿದ್ದೇವೆ ಎಂದು ವನಿ ಚಿಕ್ಕಪ್ಪ ಫಾರೂಕ್ ವನಿ ಹೇಳಿದ್ದಾರೆ.
ಅವನು ಮಾಡಿದ್ದು ಸರಿಯಿಲ್ಲ, ಅವನು ಯಾವತ್ತೂ  ಹಾಗೆ ಇರಲಿಲ್ಲ, ಯಾರು ಆತನನ್ನು ಹಿಡಿದಿರಿಸಿಕೊಂಡಿದ್ದಾರೋ ಅವರು ವಾಪಸ್ ಕಳಿಸಲಿ, ಅತನ ಪೋಷಕರಿಗೆ ವಯಸ್ಸಾಗಿದೆ, ಅವರ ತಾಯಿಗೆ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರನ್ನು ನೋಡಿಕೊಳ್ಳಬೇಕಾಗಿದೆ, ಹೀಗಾಗಿ ಆತನನ್ನು ವಾಪಸ್ ಕಳಿಸಬೇಕು ಎಂದು ಹೇಳಿದ್ದಾರೆ.
1990 ರಿಂದ ಈ ಉಗ್ರ ಸಂಘಟನೆ ಕಣಿವೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಭಾರತೀಯ ಸೈನ್ಯದಿಂದ ದಬ್ಬಾಳಿಕೆಯ ವಿರುದ್ಧ ಹೋರಾಟದ ಹೆಸರಿನಲ್ಲಿ ಯುವಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT