ದೇಶ

'ಒಂದು ದೇಶ, ಒಂದು ಚುನಾವಣೆ'ಯಿಂದ 4500 ಕೋಟಿ ರೂ ಹೊರೆ: ಚುನಾವಣಾ ಆಯೋಗ

Srinivasamurthy VN
ನವದೆಹಲಿ: ಕೇಂದ್ರ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕ ಕಾಲಕ್ಕೆ ಚುನಾವಣೆ ನಡೆಸಲು ಹೆಚ್ಚುವರಿಯಾಗಿ 4500 ಕೋಟಿ ರೂ ಅವಶ್ಯಕತೆ ಇದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.
ಒಂದು ದೇಶ, ಒಂದು ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಿಡುಗಡೆ ಮಾಡಿರುವ ಕರಡು ವರದಿಯಲ್ಲಿ 2019ರ ಚುನಾವಣೆಗೆ 10,60,000 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಬೇಕಾಗುತ್ತದೆ. ಒಂದು ವೇಳೆ ಏಕ ಕಾಲಕ್ಕೆ ಚುನಾವಣೆ ನಡೆದರೆ 12.9 ಲಕ್ಷ ಮತಯಂತ್ರ ಮತ್ತು 12.3 ಲಕ್ಷ ವಿವಿಪ್ಯಾಟ್‌ಗಳ ಕೊರತೆಯಾಗುತ್ತದೆ. ಅದನ್ನು ನೀಗಿಸಲು ಅಷ್ಟು ಪ್ರಮಾಣದ ಮತಯಂತ್ರ ಮತ್ತು ವಿವಿ ಪ್ಯಾಟ್ ಗಳ ಅವಶ್ಯಕತೆಯಿದೆ ಎಂದರು.
ಪ್ರತಿ ಯಂತ್ರದ ಆಯಸ್ಸು 15 ವರ್ಷಗಳೆಂದು ಅಂದಾಜು ಮಾಡಿದರೂ ಈಗಿನ ದರದ ಪ್ರಕಾರ 2024ರಲ್ಲಿ ಎರಡನೇ ಏಕ ಕಾಲಕ್ಕೆ ಚುನಾವಣೆ ನಡೆಸಲು 1,751 ಕೋಟಿ, 2029ರಲ್ಲಿ ಮೂರನೇ ಏಕ ಕಾಲಕ್ಕೆ ಚುನಾವಣೆ ನಡೆಸಲು 2017.93 ಕೋಟಿ ರು.ಗಳ ಅವಶ್ಯಕತೆ ಎದುರಾಗುತ್ತದೆ. 2034 ರ ಏಕ ಕಾಲಕ್ಕೆ ಚುನಾವಣೆ ನಡೆಸಲು 13,981 ಕೋಟಿ ರುಗಳ ಅವಶ್ಯಕತೆ ಕಂಡು ಬರುತ್ತದೆ ಎಂದು ಆಯೋಗ ತಿಳಿಸಿದೆ. ಅಂತೆಯೇ ವಿದ್ಯುನ್ಮಾನ ಮತ ಯಂತ್ರಗಳ ಖರೀದಿಗೆ 4,500 ಕೋಟಿ ರೂಗಳ ಅವಶ್ಕತೆ ಇದೆ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ.
SCROLL FOR NEXT