ದೇಶ

'ದಲಿತ' ಪದ ಬಳಕೆ ಬೇಡ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ

Srinivasamurthy VN
ನವದೆಹಲಿ: ಸುದ್ದಿಗಳ ಬರೆಯುವಾಗ 'ದಲಿತ' ಎಂಬ ಪದಪ್ರಯೋಗ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. 
ಬಾಂಬೇ ಹೈಕೋರ್ಟ್ ನ ನಾಗ್ಪುರ ಬೆಂಚ್ ನಲ್ಲಿ ವಿಚಾರಣೆ ವೇಳೆ ಕೋರ್ಟ್ ಗೆ ಕೇಂದ್ರ ಸರ್ಕಾರ ಈ ಬಗ್ಗೆ ಮಾಹಿತಿ ನೀಡಿದ್ದು, 'ದಲಿತ' ಪದದ ಬದಲು ಪರಿಶಿಷ್ಟ ಜಾತಿ ಎಂಬ ಪದಪ್ರಯೋಗ ಮಾಡುವಂತೆ ಸರ್ಕಾರ ಸೂಚಿಸಿದೆ. 
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 'ದಲಿತ ಎಂಬ ಪದಬಳಕೆಗೆ ಸಂಬಂಧಿಸಿದಂತೆ ನಿರ್ದೇಶನ ನೀಡಬೇಕೆ?' ಎಂದು ಬಾಂಬೆ ಹೈಕೋರ್ಟಿನ ನಾಗ್ಪುರ ಬೆಂಚ್ ಕೇಂದ್ರ ಸರ್ಕಾರವನ್ನು ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ದಲಿತ ಪದದ ಬದಲು ಪರಿಶಿಷ್ಟ ಜಾತಿ ಎಂಬ ಪದವನ್ನು ಬಳಕೆ ಮಾಡಲು ತಿಳಿಸಿದೆ.
ದಲಿತ ಎಂಬುದಕ್ಕೆ ಸಾಂವಿಧಾನಿಕ ಪದ ಪರಿಶಿಷ್ಟ ಜಾತಿ ಎಂದಾಗಿದ್ದು, ಇನ್ನು ಮೇಲೆ ಪ್ರಮಾಣ ಪತ್ರ ಅಥವಾ ಇನ್ನು ಯಾವುದೇ ಗುರುತಿನ ಚೀಟಿಗಳಲ್ಲಿ ಇದೇ ಪದವನ್ನು ಬಳಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಈಗಾಗಲೇ ಈ ಕುರಿತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಸೂಚನೆ ನೀಡಿದೆ. ಇನ್ನೊಂದು ತಿಂಗಳಿನಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಕಡೆಯಿಂದ ಎಲ್ಲಾ ಮಾಧ್ಯಗಮಳಿಗೆ ಈ ಕುರಿತು ಪ್ರಕಟಣೆ ನೀಡಲಾಗುವುದು ಎಂದೂ ಮಾಹಿತಿ ಪ್ರಸಾರ ಸಚಿವಾಲಯ ತಿಳಿಸಿದೆ.
SCROLL FOR NEXT