ನವದೆಹಲಿ: ಅಡುಗೆ ಅನಿಲ, ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರೋಧಿ ಕಾಂಗ್ರೆಸ್ ಸೆಪ್ಟೆಂಬರ್ 10ಕ್ಕೆ ಬಾರತ್ ಬಂದ್ ಗೆ ಕರೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಈ ನಿಲುವು ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಲಿದೆ. ಹೀಗಾಗಿ ಎನ್ಡಿಎ ಸರ್ಕಾರದ ಈ ವರ್ತನೆಯನ್ನು ಖಂಡಿಸಿ ಸೆಪ್ಟೆಂಬರ್ 10ಕ್ಕೆ ಭಾರತ್ ಬಂದ್ ಗೆ ಕರೆ ನೀಡಿರುವುದಾಗಿ ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ತೈಲ ದರ ಹೆಚ್ಚಳದ ಮೂಲಕ ಸುಮಾರು 11 ಲಕ್ಷ ಕೋಟಿಯಷ್ಟು ಲೂಟಿ ಮಾಡುತ್ತಿರುವ ಬಿಜೆಪಿಯ ವರ್ತನೆ ಹಾಗೂ ರಾಜ್ಯದಲ್ಲಿ ಅಬಕಾರಿ ಇಲಾಖೆ ಹೇರಿರುವ ಹೆಚ್ಚುವರಿ ತೆರಿಗೆ ನೀತಿ ವಿರೋಧಿಸಿ ಬಂದ್ ಗೆ ಕರೆ ನೀಡಿರುವುದಾಗಿ ಹೇಳಿದರು.
ಭಾರತ್ ಬಂದ್ ಗೆ ಎಲ್ಲಾ ವಿರೋಧ ಪಕ್ಷದ ನಾಯಕರು ಸಹ ಬೆಂಬಲ ನೀಡಬೇಕು. ಅಲ್ಲದೇ ಎಲ್ಲಾ ಎನ್ಜಿಓ ಹಾಗೂ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸುರ್ಜೆವಾಲಾ ಮನವಿ ಮಾಡಿದರು.