ಜೌನ್‌ಪುರ: ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ನಡೆಸಿ ಕ್ರೈಸ್ತ ಧರ್ಮಕ್ಕೆ ಮತಾತಂತರವನ್ನು ಉತ್ತೇಜಿಸುತ್ತಿದ್ದ 271 ಜನರ ವಿರುದ್ಧ ಕೋರ್ಟ್ ಆದೇಶದ ನಂತರ ಎಫ್ಐಆರ್ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಜೌನ್ ಪುರದ ಪೊಲೀಸರು 271 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ವಂಚನೆ, ಧಾರ್ಮಿಕ ಕೇಂದ್ರಗಳನ್ನು ಹಾಳುಗೆಡವುದು, ರಾಷ್ಟ್ರೀಯ ಏಕೀಕರಣವನ್ನು ಪೂರ್ವಾಗ್ರಹಗೊಳಿಸುವುದು ಸೇರಿದಂತೆ ವಿವಿಧ ಸೆಕ್ಷಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಪಾಂಡೆ ಹೇಳಿದ್ದಾರೆ.
ಎಫ್ಐಆರ್ ನಲ್ಲಿ ದಾಖಲಾಗಿರುವವರನ್ನು ಜೌನ್ ಪುರದ ನಿವಾಸಿಗಳಾದ ದುರ್ಗಾ ಪ್ರಸಾದ್ ಯಾದವ್, ಕೀರ್ತಿ ರೈ, ಜಿತೇಂದ್ರ ರಾಮೋನ್ ಎಂದು ಗುರುತಿಸಲಾಗಿದೆ. ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ನಡೆಸಿ ಕ್ರೈಸ್ತ ಧರ್ಮ ಮತಾಂತರವನ್ನು ಉತ್ತೇಜಿಸುತ್ತಿದ್ದವರ ವಿರುದ್ಧ ಕೋರ್ಟ್ ನಲ್ಲಿ ಹಿಂದೂ ಜಾಗರಣ ಮಂಚ್(ಹೆಚ್ ಜೆಎಂ) ಕಾರ್ಯಕರ್ತರು ಪ್ರಕರಣ ದಾಖಲಿಸಿದ್ದರು. ಕೋರ್ಟ್ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿತ್ತು.