ದೇಶ

ಸಲಿಂಗಕಾಮ ಅಪರಾಧವಲ್ಲ, ಆದರೆ, ಸಲಿಂಗ ವಿವಾಹ ಸಲ್ಲದು- ಆರ್ ಎಸ್ ಎಸ್

Nagaraja AB

ನವದೆಹಲಿ: ಸಲಿಂಗ ಕಾಮ ಅಪರಾಧವಲ್ಲ . ಆದರೆ, ಅಸ್ವಾಭಾವಿಕವಾದ ಸಲಿಂಗ ವಿವಾಹವನ್ನೂ  ಬೆಂಬಲಿಸುವುದಿಲ್ಲ ಎಂದು ಆರ್ ಎಸ್ ಎಸ್ ಹೇಳಿದೆ.

ಸಲಿಂಗಕಾಮವನ್ನು ಅಪರಾಧೀಕರಣಗೊಳಿಸುವ ಸೆಕ್ಷನ್ 377ನ್ನು ಸುಪ್ರೀಂಕೋರ್ಟ್ ತೆಗೆದುಹಾಕಿದ ನಂತರ ಆರ್ ಎಸ್ ಎಸ್ ಈ ರೀತಿಯ ಹೇಳಿಕೆ ನೀಡಿದ್ದು, ಸುಪ್ರೀಂಕೋರ್ಟ್ ತೀರ್ಪಿನಂತೆ ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ ಎಂದು ಆರ್ ಎಸ್ ಎಸ್  ಪ್ರಚಾರ ಪ್ರಮುಖ ಅರುಣ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಕ್ತಾರರಂತೆ ಪ್ರಚಾರ ಪ್ರಮುಖರು ಕಾರ್ಯನಿರ್ವಹಿಸುತ್ತಾರೆ.

ಆದಾಗ್ಯೂ,  ಸಲಿಂಗ ವಿವಾಹ  ಅಸ್ವಾಭಾವಿಕವಾಗಿರುವುದರಿಂದ ಅಂತಹ ಸಂಬಂಧಗಳಿಗೆ ನಾವು ಬೆಂಬಲಿಸುವುದಿಲ್ಲ  ಎಂದು ಹೇಳುವ ಮೂಲಕ ಸಂಘದ ಹಳೆಯ ತತ್ವಕ್ಕೆ ಬದ್ಧತೆ ವ್ಯಕ್ತಪಡಿಸಿದ್ದಾರೆ.

ಸಲಿಂಗ ವಿವಾಹದಂತಹ ಸಂಬಂಧಕ್ಕೆ ಭಾರತೀಯ ಸಮಾಜದಲ್ಲಿ ಮಾನ್ಯತೆ ನೀಡುವುದಿಲ್ಲ. ಆದ್ದರಿಂದ ಈ ವಿಚಾರದ ಬಗ್ಗೆ ಸಾಮಾಜಿಕ ಮತ್ತು ಮನೋಶಾಸ್ತ್ರಜ್ಞರ ಮಟ್ಟದಲ್ಲಿ ಚರ್ಚೆಯಾಗಬೇಕಾದ ಅಗತ್ಯತೆ ಇದೆ ಎಂದು ಕುಮಾರ್ ಹೇಳಿದ್ದಾರೆ.

SCROLL FOR NEXT