ದೇಶ

ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣ: ಗೌರಿ ಲಂಕೇಶ್ ಹಂತಕರನ್ನು ವಶಕ್ಕೆ ಪಡೆದ ಸಿಬಿಐ

Shilpa D
ಮುಂಬಯಿ: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ.
ದಾಬೋಲ್ಕರ್ ಕೊಲೆ ಪ್ರಕರಣದಲ್ಲಿ ಕಾಳೆ ಮಾಸ್ಟರ್ ಮೈಂಡ್ ಆಗಿರಬಹುದೆಂದು ಸಿಬಿಐ ಅಧಿಕಾರಿಗಳು ಶಂಕಿಸಿದ್ದಾರೆ. 
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳೆಯನ್ನು ಕರ್ನಾಟಕ ವಿಶೇಷ ತನಿಖಾ ದಳ ಪೋಲೀಸರು ಮೇ ತಿಂಗಳಲ್ಲಿ ಬಂಧಿಸಿದ್ದರು, ಕಾಳೆಯನ್ನು ವಶಕ್ಕೆ ಪಡೆದಿರುವ ಸಿಬಿಐ ಮಹಾರಾಷ್ಟ್ರದ  ಪುಣೆಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.
2013 ರ ಆಗಸ್ಟ್ 20 ರಂದು  ದಾಬೋಲ್ಕರ್ ಅವರನ್ನು ಪುಣೆಯಲ್ಲಿ ಕೊಲ್ಲಲಾಗಿತ್ತು. ಕಾಳೆಯನ್ನು ವಿಚಾರಣೆ ನಡೆಸುವಾಗ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಆತನ ಕೈವಾಡವಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು,
ಕಾಳೆ ಮತ್ತು ಸಚಿವ್ ಅಂಡುರೆ ದಾಬೋಲ್ಕರ್ ಕೊಲೆ ಪ್ರಕರಣದಲ್ಲಿ ಪ್ರಮುಖ ಶೂಟರ್ ಗಳಾಗಿದ್ದರು ಎಂದು ಆರೋಪಿಸಲಾಗಿದ್ದು, ಈ ಇಬ್ಬರು ಔರಂಗಬಾದ್ ಜಿಲ್ಲೆಯ ಲಾಡ್ಜ್ ವೊಂದರಲ್ಲಿ  ತಂಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ತಿಂಗಳು ಸುರಾಳೆ ಸ್ನೇಹಿತ ರೋಹಿತ್ ರೇಗ್ ನಿವಾಸದಲ್ಲಿ ಪಿಸ್ತೂಲ್ ಒಂದು ಪತ್ತೆಯಾಗಿತ್ತು, ಕಾಳೆ ಪಿಸ್ತೂಲ್ ಅನ್ನು ಅಂಡುರೆಗೆ ನೀಡಿದ್ದ, ಅದು ಆತನ ಬಾವಮೈದುನ ಶುಭಂ ಸುರಾಳೆ ಮನೆ ತಲುಪಿತ್ತು, 
ವಶ ಪಡಿಸಿಕೊಂಡಿರುವ ಪಿಸ್ತೂಲ್ ಅನ್ನು ವಿಧಿ  ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಗಾಗಿ ಇನ್ನೂ ಕಾಯಲಾಗುತ್ತಿದೆ, ಈ ಪ್ರಕರಣ ಸಂಬಂಧ ಕಾಲಸ್ಕರ್ ಎಂಬಾತನನ್ನು ಸಿಬಿಐ ವಶಕ್ಕೆ ಪಡೆದಿದೆ.  ಆತನನ್ನು ಕಳೆದ ತಿಂಗಳು ಮಹಾರಾಷ್ಟ್ರ ಎಟಿಎಸ್ ಪೊಲೀಸರು ಬಂಧಿಸಿದ್ದರು.
SCROLL FOR NEXT