ತಪ್ಪಿದ ಭಾರೀ ಅನಾಹುತ; ಮಾಲ್ಡೀವ್ಸ್ನಲ್ಲಿ ತಪ್ಪಾದ ರನ್ ವೇಯಲ್ಲಿ ಏರ್ ಇಂಡಿಯಾ ಲ್ಯಾಂಡ್!
ಮಾಲ್ಡೀವ್ಸ್ ನ ಮಾಲೆ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ತಪ್ಪಿದ್ದು 136 ಮಂದಿಯಿಂದ ಏರ್ ಇಂಡಿಯಾ ವಿಮಾನ ತಪ್ಪಾದ ರನ್ ವೇಯಲ್ಲಿ ಲ್ಯಾಂಡ್ ಆಗಿದೆ...
ಮಾಲ್ಡೀವ್ಸ್ ನ ಮಾಲೆ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ತಪ್ಪಿದ್ದು 136 ಮಂದಿಯಿಂದ ಏರ್ ಇಂಡಿಯಾ ವಿಮಾನ ತಪ್ಪಾದ ರನ್ ವೇಯಲ್ಲಿ ಲ್ಯಾಂಡ್ ಆಗಿದೆ.
ತಿರುವನಂತಪುರಂನಿಂದ ಮಾಲೆಗೆ ತೆರಳುತ್ತಿದ್ದ ಎ320 ನಿಯೋ ವಿಮಾನ ಇನ್ನು ನಿರ್ಮಾಣ ಹಂತದಲ್ಲಿದ್ದ ರನ್ ವೇಯಲ್ಲಿ ಲ್ಯಾಂಡ್ ಮಾಡಿದ್ದು ಸ್ವಲ್ಪ ತಪ್ಪಿದ್ದರು ದೊಡ್ಡ ಅನಾಹುತ ಸಂಭವಿಸುತ್ತಿತ್ತು.
ಏರ್ ಇಂಡಿಯಾ ವಿಮಾನದಲ್ಲಿ ವಿಮಾನ ಸಿಬ್ಬಂದಿ ಮತ್ತು 136 ಪ್ರಯಾಣಿಕರಿದ್ದರು. ಇನ್ನು ಮಾಲ್ಡೀವ್ಸ್ ನಲ್ಲಿ ವಿಮಾನ ತಪ್ಪಾದ ರನ್ ವೇಯಲ್ಲಿ ಲ್ಯಾಂಡ್ ಮಾಡಿರುವುದನ್ನು ಏರ್ ಇಂಡಿಯಾ ವಿಮಾನದ ವಕ್ತಾರ ಸ್ಪಷ್ಟಪಡಿಸಿದ್ದು ಇನ್ನುಳಿದಂತೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.