ದೇಶ

ಶೀಘ್ರವೇ ವಿವಿ, ಕಾಲೇಜುಗಳಲ್ಲಿ ಉದ್ಯಮಶೀಲತೆ ಕುರಿತ ಕೋರ್ಸ್ ಲಭ್ಯ: ಎಐಸಿಟಿಇ ಅಧ್ಯಕ್ಷರು

Srinivas Rao BV
ಶೀಘ್ರವೇ ವಿಶ್ವವಿದ್ಯಾನಿಲಯಗಳಲ್ಲಿ, ಕಾಲೇಜುಗಳಲ್ಲಿ ಉದ್ಯಮಶೀಲತೆ ಕುರಿತ ಕೋರ್ಸ್ ಲಭ್ಯವಾಗಲಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ, ನವದೆಹಲಿ(ಎಐಸಿಟಿಇ) ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. 
ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವುದಕ್ಕಾಗಿ ಇಂಟರ್ನ್ಶಿಪ್ ಪ್ರೋಗ್ರಾಂ, ಕೌಶಲ್ಯ ಪ್ರೋಗ್ರಾಂಗಳನ್ನು ಹೆಚ್ಚಿಸುವ ಅವಶ್ಯಕತೆ ಇದ್ದು ವಿದ್ಯಾರ್ಥಿಗಳಿಗೆ ಸಪೋರ್ಟ್ ಸಿಸ್ಟಮ್ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ.  ಸ್ಟಾರ್ಟ್-ಅಪ್ ಸಂಸ್ಕೃತಿಗೆ ವಿದ್ಯಾರ್ಥಿಗಳು ತೆರೆದುಕೊಳ್ಳುವಂತೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯಮಶೀಲತೆ ಕುರಿತ ಕೋರ್ಸ್ ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಎಐಸಿಟಿಇ ಅಧ್ಯಕ್ಷರೂ ಆಗಿರುವ ಪ್ರೊ.ಸಹಸ್ರಬುಧೆ ಹೇಳಿದ್ದಾರೆ. 
ಎಐಸಿಟಿಇ ತನ್ನದೇ ಆದ ಸ್ಟಾರ್ಟ್-ಅಪ್ ನೀತಿಯನ್ನು ರೂಪಿಸಿದ್ದು, ವಿವಿಗಳು ಹಾಗೂ ಕಾಲೇಜುಗಳು ಇತರ ಕೋರ್ಸ್ ಗಳ ಜತೆ ಉದ್ಯಮಶೀಲತೆ ಕುರಿತ ಕೋರ್ಸ್ ಗಳನ್ನೂ ಪ್ರಾರಂಭಿಸಲಿದೆ ಎಂದು ಪ್ರೊ.ಸಹಸ್ರಬುಧೆ ಮಾಹಿತಿ ನೀಡಿದ್ದಾರೆ. 
SCROLL FOR NEXT