ವೈಮಾನಿಕ ಟ್ಯಾಕ್ಸಿ ಸೇವೆ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚಿಸಿದ ಉಬರ್ ನ ಉನ್ನತ ಅಧಿಕಾರಿಗಳು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಉಬರ್ ನ ಉನ್ನತ ಅಧಿಕಾರಿಗಳು ವೈಮಾನಿಕ ಟ್ಯಾಕ್ಸಿ ಸೇವೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಗ್ಲೋಬಲ್ ಮೊಬಿಲಿಟಿ ಶೃಂಗಸಭೆಯಲ್ಲಿ ಉಬರ್ ನ ವೈಮಾನಿಕ ಯೋಜನೆಗಳ ಮುಖ್ಯಸ್ಥ ಎರಿಕ್ ಆಲಿಸನ್, ವೈಮಾನಿಕ ಉತ್ಪನ್ನ ವಿಭಾಗದ ಮುಖ್ಯಸ್ಥರಾದ ನಿಖಿಲ್ ಗೋಯಲ್ ಪ್ರಧಾನಿಯೊಂದಿಗೆ ಉಬರ್ ಎಲಿವೇಟ್ ನ ಅಡಿಯಲ್ಲಿ ಭವಿಷ್ಯದ ಏರಿಯಲ್ ಟ್ಯಾಕ್ಸಿಗಳ ಬಗ್ಗೆ ಚರ್ಚೆ ನಡೆದಿದ್ದು, ಮಾಲಿನ್ಯ ನಿಯಂತ್ರಣ, ವಾಹನ ದಟ್ಟಣೆ ಕಡಿಮೆ ಮಾಡುವುದರ ಜೊತೆ ಜೊತೆಗೇ ಆರ್ಥಿಕತೆಗೂ ಹೇಗೆ ವೈಮಾನಿಕ ಟ್ಯಾಕ್ಸಿ ಉತ್ತಮವಾಗಿರಲಿದೆ ಎಂಬ ಕುರಿತು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
"ಭವಿಷ್ಯದ ಸಂಶೋಧನೆಗಳಿಗೆ ಭದ್ರ ಬುನಾದಿ ಹಾಕುವುದರ ಕುರಿತ ಮಹತ್ವವನ್ನು ತಿಳಿಸಿದ್ದು, ಈ ಯೋಜನೆಯಲ್ಲಿ ಸರ್ಕಾರದೊಂದಿಗೆ ಭಾಗಿಯಾಗಲು ಉಬರ್ ಸಿದ್ಧವಿದೆ ಎಂಬ ಸಂದೇಶವನ್ನು ಪ್ರಧಾನಿಗೆ ರವಾನಿಸಲಾಗಿದೆ ಎಂದು ವೈಮಾನಿಕ ಯೋಜನೆಗಳ ಮುಖ್ಯಸ್ಥ ಎರಿಕ್ ಆಲಿಸನ್ ಹೇಳಿದ್ದಾರೆ.
ಭವಿಷ್ಯದ ಟ್ಯಾಕ್ಸಿ ಸೇವೆಗಳನ್ನು ಜಾರಿಗೊಳಿಸುವುದಕ್ಕೆ ಉಬರ್ ಸಿದ್ಧಪಡಿಸಿರುವ ವಿಶ್ವದ ಟಾಪ್ 5 ಜಾಗತಿಕ ಪ್ರದೇಶಗಳ ಪಟ್ಟಿಯಲ್ಲಿ ಭಾರತವೂ ಇದ್ದು, ಮುಂದಿನ 5 ವರ್ಷಗಳಲ್ಲಿ ಈ ಸೇವೆಯನ್ನು ಜಾರಿಗೊಳಿಸುವ ಸಂಬಂಧ ಮಾತುಕತೆ ನಡೆಸಲಾಗಿದೆ. ಉಬರ್ ಅಮೆರಿಕದ ಡಲ್ಲಾಸ್ ಮತ್ತು ಲಾಸ್ ಏಂಜಲೀಸ್ ನಗರಗಳಲ್ಲಿ ಇಂತಹ ಪ್ರಯೋಗವನ್ನು ಈಗಾಗಲೇ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics