ದೇಶ

ಭಾರತ್ ಬಂದ್: ಮೋದಿ ಸರ್ಕಾರದ ವಿರುದ್ಧ 'ಕೈ' ಜೋಡಿಸಿದ ಪ್ರತಿಪಕ್ಷಗಳು

Lingaraj Badiger
ನವದೆಹಲಿ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಎಡರಂಗ ಸೋಮವಾರ ಕರೆ ನೀಡಿರುವ ಭಾರತ್ ಬಂದ್ ಗೆ ಬಹುತೇಕ ಪ್ರತಿಪಕ್ಷಗಳು ಬೆಂಬಲ ಸೂಚಿಸಿವೆ.
ತೈಲ ಬೆಲೆ ನಿರಂತರ ಏರಿಕೆಗೆ ನೇರ ವಿವರಣೆ ನೀಡಲು ನಿರಾಕರಿಸುತ್ತಿರುವ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಗೆ ಜೆಡಿಎಸ್, ಸಮಾಜವಾದಿ ಪಾರ್ಟಿ, ಡಿಎಂಕೆ, ಆರ್ ಜೆಡಿ, ಎಂಎನ್ಎಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಸಂಪೂರ್ಣ ಬೆಂಬಲ ಘೋಷಿಸಿವೆ.
ಬಿಜೆಡಿ ಹಾಗೂ ಆಮ್ ಆದ್ಮಿ ಪಕ್ಷ ಸಹ ತೈಲ ಬೆಲೆ ಏರಿಕೆಗೆ ವಿರೋಧಿಸಿವೆ. ಆದರೆ ಬಂದ್ ಗೆ ಬೆಂಬಲಿಸುವುದಿಲ್ಲ ಎಂದು ಹೇಳಿವೆ.
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕು ಮತ್ತು ಅಬಕಾರಿ ಸುಂಕ ಹಾಗೂ ಅಬಕಾರಿ ವ್ಯಾಟ್ ಅನ್ನು ಕಡಿಮೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. 
ಭಾರತ್ ಬಂದ್ ಗೆ ಸುಮಾರು 20 ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ ಎಂದು ಕಾಂಗ್ರೆಸ್ ನಾಯಕ ಅಜೆಯ್ ಮಾಕೇನ್ ಅವರು ಹೇಳಿದ್ದಾರೆ.
SCROLL FOR NEXT