ಭುವನೇಶ್ವರ್: ರಸ್ತೆಯಲ್ಲೇ ನೃತ್ಯ ಮಾಡುತ್ತಾ ಸಂಚಾರ ದಟ್ಟಣೆ ನಿಯಂತ್ರಿಸುವ ಗೃಹ ರಕ್ಷಕ!
ರಾಜಧಾನಿ ಭುವನೇಶ್ವರ್ ನಲ್ಲಿ ಸಂಚಾರ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿರುವ ಗೃಹ ರಕ್ಷಕ ಸಿಬ್ಬಂದಿಯೊಬ್ಬ ರಸ್ತೆಯಲ್ಲಿಯೇ ನೃತ್ಯ ಮಾಡುತ್ತಾ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದಾರೆ.
ಒಡಿಶಾ: ರಾಜಧಾನಿ ಭುವನೇಶ್ವರ್ ನಲ್ಲಿ ಸಂಚಾರ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿರುವ ಗೃಹ ರಕ್ಷಕ ಸಿಬ್ಬಂದಿಯೊಬ್ಬ ರಸ್ತೆಯಲ್ಲಿಯೇ ನೃತ್ಯ ಮಾಡುತ್ತಾ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದಾರೆ.
34 ವರ್ಷದ ಪ್ರತಾಪ್ ಚಂದ್ರ ಖಾಂದ್ವಾಲ್ ಈ ರೀತಿಯ ನೃತ್ಯದ ಮೂಲಕ ವಾಹನ ಸವಾರು ಹಾಗೂ ಪ್ರಯಾಣಿಕರನ್ನು ರಂಜಿಸುತ್ತಿದ್ದಾರೆ.
ಗೃಹ ರಕ್ಷಕರಾಗಿರುವ ಪಿ. ಸಿ. ಖಂದ್ವಾಲ್ ಅವರನ್ನು ಟ್ರಾಫಿಕ್ ನಿಯಂತ್ರಣಕ್ಕಾಗಿ ಸಂಚಾರಿ ಪೊಲೀಸ್ ಆಗಿ ನಿಯೋಜಿಸಲಾಗಿದೆ. ಆದರೆ, ಈತ ನೃತ್ಯ ಮಾಡುವ ಮೂಲಕ ಸವಾರರನ್ನು ಮೋಡಿ ಮಾಡುವುದಲ್ಲದೆ, ನಿಯಮ ಉಲ್ಲಂಘನೆಯಾಗದಂತೆ ಸಂದೇಶ ನೀಡುತ್ತಿದ್ದಾರೆ.
ಈ ಕುರಿತಂತೆ ಸುದ್ದಿಸಂಸ್ಥೆಯೊಂದರ ಜೊತೆಗೆ ಮಾತನಾಡಿರುವ ಪಿ.ಸಿ. ಖಾಂದ್ವಾಲ್, ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸದಂತೆ ನೃತ್ಯ ಮೂಲಕ ಮನವೊಲಿಸುತ್ತೇನೆ. ನೃತ್ಯ ಶೈಲಿಯಿಂದ ಆಕರ್ಷಿತಗೊಂಡ ಜನರು ಜನರು ನಿಯಮ ಪಾಲಿಸುತ್ತಾರೆ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.