ದೇಶ

ಕಾಶ್ಮೀರದಲ್ಲಿ ಮತ್ತೆ ಮರುಕಳುಹಿಸಿದ ನಿಗೂಢ ಹತ್ಯೆಗಳು

Lingaraj Badiger
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿಗೂಢ ಹತ್ಯೆಗಳು ಮತ್ತೆ ಮರುಕಳುಹಿಸಿದ್ದು, ಕಳೆದ ನಾಲ್ಕು ದಿನಗಳಲ್ಲಿ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 
ಇಂದು ಮಧ್ಯಾಹ್ನ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೊರೆ ಪ್ರದೇಶದ ಅರಂಪೋರೆಯಲ್ಲಿ 35 ವರ್ಷದ ಪೆಂಟರ್ ಒಬ್ಬರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದ ಪೆಂಟರ್ ಬಿಹಾರ ಮೂಲದ ಹರೂನ್ ರಶಿದ್ ಎಂದು ಗುರುತಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ಬಂದೂಕುಧಾರಿಯೊಬ್ಬ ನಿನ್ನೆ ಸಂಜೆ ಶ್ರೀನಗರದ ಖನ್ಯಾರ್ ಪ್ರದೇಶದ ಬಬ್ಡಮ್ ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಕುಪ್ವಾರದ ಅಬ್ದುಲ್ ಅಹದ್ ಗನಿ ಎಂದು ಗುರುತಿಸಲಾಗಿದ್ದು, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವೇ ಗಂಟೆಗಳಲ್ಲಿ ಇಬ್ಬರನ್ನು ನಿಗೂಢವಾಗಿ ಹತ್ಯೆ ಮಾಡಿದ ಘಟನೆ ಕಣಿವೆ ರಾಜ್ಯದ ಜನತೆಯ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆಯೂ ಕಾಶ್ಮೀರದಲ್ಲಿ ನಿಗೂಢ ಹತ್ಯೆಗಳು ನಡೆದಿದ್ದು, ಆ ಹತ್ಯೆಗಳ ಹಿಂದೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕೈವಾಡ ಇದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು.
SCROLL FOR NEXT