ದೇಶ

ನರಭಕ್ಷಕ ಹೆಣ್ಣು ಹುಲಿಗೆ ಅರವಳಿಕೆ ಕೊಡುವುದು ಅಥವಾ ಕೊಲ್ಲುವುದು ಅರಣ್ಯ ಇಲಾಖೆಗೆ ಬಿಟ್ಟ ತೀರ್ಮಾನ: ಸುಪ್ರೀಂ

Raghavendra Adiga
ನವದೆಹಲಿ: ಒಂದು ಮಾನವ ಭಕ್ಷಕ ಹುಲಿಯನ್ನು ಅರೆವಳಿಕೆ ನೀಡಿ ಶಾಂತಗೊಳಿಸಲು ಯತ್ನ ನಡೆಸಬೇಕೆ ಅಥವಾ ಗುಂಡು ಹಾರಿಸಿ ಹತ್ಯೆ ಮಾಡಬೇಕೆ ಎನ್ನುವುದು ಮಹಾರಾಷ್ಟ್ರದ ಅರಣ್ಯಾಧಿಕಾರಿಗಳ ಮುಂದಿರುವ ಸಧ್ಯದ ದೊಡ್ಡ ಪ್ರಶ್ನೆಯಾಗಿದೆ. 
ಹೆಣ್ಣು ಹುಲಿಯೊಂದು ಮಹಾರಾಷ್ಟ್ರದ ಯವಟ್ಮಲ್ ಜಿಲ್ಲೆ ಅರಣ್ಯ ಪ್ರದೇಶದಲ್ಲಿ ಕನಿಷ್ಠ ಒಂಬತ್ತು ಮಂದಿಯ ಸಾವಿಗೆ ಕಾರಣವಾಗಿದೆ. ಒಂಬತ್ತು ತಿಂಗಳ ತನ್ನ ಎರಡು ಮರಿಗಳೊಡನೆ T1 ಎಂದು ಗುರುತಿಸಲ್ಪಟ್ಟಿರುವ ಆರು ವರ್ಷ ವಯಸ್ಸಿನ ಹೆಣ್ಣು ಹುಲಿ "ಮಾನವ ಭಕ್ಷಕ" ಆಗಿದೆ ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದಾರೆ.
ಕಳೆದ ತಿಂಗಳು ಮೂವರನ್ನು ಕೊಂದಿದ್ದ ಹುಲಿ ವಿಚಾರದಲ್ಲಿ ಕಬಾಂಬೆ ಹೈಕೋರ್ಟ್ ಆದೇಶದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ.
ಅರ್ಜಿದಾರರು ಹುಲಿಯು ಮಾನವರನ್ನು ಕೊಂದಿದೆ, ಅವರ ಮಾಂಸವನ್ನು ತಿಂದಿದೆ ಎಂದು ಹೇಳುವುದಕ್ಕೆ ಯಾವ ಆಧಾರವಿಲ್ಲ ಎಂದು ವಾದಿಸಿದ್ದರೆ ಅರಣ್ಯ ಇಲಾಖೆ ಮಾತ್ರ ತಾಯಿ ಹಾಗೂ ಎರಡು ಮರಿಗಳು ಒಂಭತ್ತು ಜನರ ಸಾವಿಗೆ ಕಾರಣವಾಗಿದೆ ಎಂದು ಅರಣ್ಯ ಇಲಾಖೆ ವಾದಿಸಿದೆ.
ಇಲಾಖೆಯು ಕಳೆದ ಆರು ತಿಂಗಳ ಕಾಲ ಹುಲಿಯನ್ನು ಪತ್ತೆ ಮಾಡಿ ಹಿಡಿಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದು ವಿಫಲವಾಗಿದೆ
ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ಈ ವಿಚಾರಣೆ ನಡೆಸಿದ್ದು ಅರ್ಜಿದಾರರು ಒಂದು ವೇಳೆ ತಾಯಿ ಹುಲಿಯನ್ನು ಅರಣ್ಯ  ಇಲಾಖೆ ಕೊಂದಿದ್ದಾದರೆ ಅದರ ಎರಡು ಮರಿಗಳಿಗೆ ಕಾಡಿನಲ್ಲಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ವಾದಿಸಿದ್ದಾರೆ.
ತಾನು ಹೈಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಸುಪ್ರೀಂ ಪೀಠ ಅರಣ್ಯ ಇಲಾಖೆ ಮೊದಲು ಹುಲಿಯನ್ನು ಅರವಳಿಕೆ ಮೂಲಕ  ಶಾಂತಿಗೊಳಿಸಲು ಪ್ರಯತ್ನಿಸಬೇಕು, ಒಂದು ವೇಳೆ ಹಾಗೆ ಮಾಡಲಾಗದೆ ಹೋದಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದೆ.
SCROLL FOR NEXT