ದೇಶ

ಮಲ್ಯ-ಜೇಟ್ಲಿ ಭೇಟಿ: ಸರ್ಕಾರದ ವಿರುದ್ಧ ವಿಪಕ್ಷಗಳ ತೀವ್ರ ಕಿಡಿ, ತನಿಖೆಗೆ ಆಗ್ರಹ

Manjula VN
ನವದೆಹಲಿ: ಭಾರತಕ್ಕೆ ಗಡೀಪಾರಾಗುವ ಭೀತಿಯಲ್ಲಿರುವ ಉದ್ಯಮಿ ವಿಜಯ್ ಮಲ್ಯ ಅವರು ನೀಡಿರುವ ಹೇಳಿಕೆಯೊಂದು ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. 
ವಿದೇಶಕ್ಕೆ ತೆರಳುವ ಮುನ್ನ ನಾನು ವಿತ್ತ ಸಚಿವರನ್ನು ಬೇಟಿ ಮಾಡಿದ್ದೆ. ನಾನು ಮಾಡಿದ್ದ ರೂ.9 ಸಾವಿರ ಕೋಟಿ ಬ್ಯಾಂಕ್ ಸಾಲ ಮರುಪಾವತಿಸುವ ಬಗ್ಗೆ ಪ್ರಸ್ತಾಪ ಇರಿಸಿದ್ದೆ ಎಂದು ಮಲ್ಯ ಅವರು ಹೇಳಿಕೆ ನೀಡಿದ್ದರು. ಮಲ್ಯ ಅವರ ಈ ಹೇಳಿಕೆ ವಿರೋಧ ಪಕ್ಷಗಳಿಗೆ ಸಿಕ್ಕ ಆಹಾರದಂತಾಗಿದೆ. 
ಮಲ್ಯ ಅವರ ಹೇಳಿಕೆ ಸಂಬಂಧ ಆಡಳಿತಾರೂಢ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿರುವ ವಿರೋಧ ಪಕ್ಷಗಳು ತನಿಖೆಗೆ ಆಗ್ರಹಿಸುತ್ತಿವೆ. 
ಮಲ್ಯ ಹೇಳಿಕೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಮಲ್ಯ ಅವರು ಗಂಭೀರ ಆರೋಪ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡಲೇ ತನಿಖೆ ಆದೇಶಿಸಬೇಕು ಹಾಗೂ ತನಿಖೆ ಪ್ರಗತಿಯಲ್ಲಿರುವವರೆಗೂ ಜೇಟ್ಲಿಯವರು ಅಧಿಕಾರದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿದ್ದಾರೆ. 
SCROLL FOR NEXT