ಸಾಂದರ್ಭಿಕ ಚಿತ್ರ 
ದೇಶ

ಜೆಎನ್ ಯು ಎಬಿವಿಪಿ ಪೋಸ್ಟರ್ ನಲ್ಲಿ ತುಂಡುಡುಗೆ, ಮಾಂಸಹಾರಕ್ಕೆ ನಿಷೇಧ ಭರವಸೆ

ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆಎನ್ ಯು) ವಿದ್ಯಾರ್ಥಿ ಸಂಘದ ಚುನಾವಣೆಗಾಗಿ...

ನವದೆಹಲಿ: ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆಎನ್ ಯು) ವಿದ್ಯಾರ್ಥಿ ಸಂಘದ ಚುನಾವಣೆಗಾಗಿ ಎಬಿವಿಪಿ ಪ್ರಣಾಳಿಕೆ ಎನ್ನಲಾದ ಪೋಸ್ಟರ್ ಗಳಲ್ಲಿ ಮಹಿಳೆಯರ ತುಂಡುಡುಗೆ, ಮಾಂಸಹಾರಕ್ಕೆ ನಿಷೇಧ ಹಾಗೂ ರಾಷ್ಟ್ರೀಯ ವಿರೋಧಿ ಒಕ್ಕಟೂಗಳಿಂದ ವಿವಿಯ ರಕ್ಷಣೆ ಭರವಸೆ ನೀಡಲಾಗಿದೆ.
ಇದೀಗ ಸಾಮಾಜಿಕ ತಾಣದಲ್ಲಿ ಈ ಪೋಸ್ಟರ್ ಗಳು ವೈರಲ್ ಆಗಿದೆ. ಆದರೆ ಎಬಿವಿಪಿ ಈ ಪೋಸ್ಟರ್ ಗಳು ತನ್ನದಲ್ಲ ಎಂದು ನಿರಾಕರಿಸಿದೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಎಬಿವಿಪಿಯ ಸೌರಭ್ ಶರ್ಮಾ ಅವರು, ನಮ್ಮನ್ನು ಕಂಡು ಭಯಗೊಂಡಿರುವ ಎಡ ಪಕ್ಷಗಳು ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಇಂತಹ ಪ್ರಣಾಳಿಕೆಯನ್ನು ನಾವು ಹೊರಡಿಸಿಲ್ಲ ಎಂದಿದ್ದಾರೆ.
ರಾತ್ರಿ ವೇಳೆ ಹುಡುಗಿಯರ ಗ್ರಂಥಾಲಯ ಪ್ರವೇಶಾವಧಿ ಕಡಿತ, ಭಾರತೀಯ ಸಂಪ್ರದಾಯದ ಉಡುಗೆಗೆ ಆದ್ಯತೆ, ಹುಟ್ಟು ಹಬ್ಬ ಆಚರಣೆಗೆ ಕಡಿವಾಣ, ಹುಡುಗರ ವಿದ್ಯಾರ್ಥಿ ನಿಲಯಕ್ಕೆ ಹುಡುಗಿಯರಿಗೆ ನಿಷೇಧ ಸೇರಿದಂತೆ ಹಲವು ಭರವಸೆಗಳನ್ನು ಪೋಸ್ಟರ್ ನಲ್ಲಿ ಬರೆಯಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT