ಅಲಹಾಬಾದ್ : 2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಆಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮಾಜಿ ಬಿಜೆಪಿ ಸಂಸದ ಹಾಗೂ ರಾಮ ಜನ್ಮಭೂಮಿ ನ್ಯಾಸ ಅಧ್ಯಕ್ಷ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ.
ರಾಮ ಮಂದಿರ ವಿವಾದವನ್ನು ಬಿಜೆಪಿ ಬಗೆಹರಿಸಲಿದ್ದು, ಸಾರ್ವತ್ರಿಕ ಚುನಾವಣೆಗೂ ಮುಂಚಿತವಾಗಿ ಮಂದಿರ ಕಟ್ಟಡ ಕಾಮಗಾರಿ ಆರಂಭವಾಗಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಯೋದ್ಯೆಯಲ್ಲಿ ರಾಮ ಆಶೀರ್ವದಿಸಿದ್ದಾಗ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜುಲೈ 25 ರಂದು ಹೇಳಿಕೆ ನೀಡಿದ್ದರು.
ಅಯೋದ್ಯೆಯಲ್ಲಿ ಕ್ರಿ. ಶ. 1528ರಲ್ಲಿ ಮೊಘಲ್ ದೊರೆ ಬಾಬರ್ ನಿರ್ಮಿಸಿದ ಬಾಬ್ರಿ ಮಸೀದಿಯನ್ನು ಡಿಸೆಂಬರ್ 6, 1992 ರಂದು ಹಿಂದೂ ಪರ ಸಂಘಟನೆಗಳಿಂದ ಧ್ವಂಸಗೊಳಿಸಲಾಗಿತ್ತು. ರಾಮಮಂದಿರವನ್ನು ಕೆಡವಿ ಬಾಬರ್ ಮಸೀದಿ ನಿರ್ಮಿಸಿದ್ದ ಎಂದು ಆನಂತರ ಹಿಂದೂಪರ ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದರು.