ದೇಶ

ತಾಂತ್ರಿಕ ದೋಷ, ಪ್ರತಿಕೂಲ ಹವಾಮಾನದ ನಡುವೆಯೂ ವಿಮಾನವನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡಿದ ಏರ್ ಇಂಡಿಯಾ ಪೈಲಟ್!

Raghavendra Adiga
ನವದೆಹಲಿ: ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ  ಇಂಧನ ಕೊರತೆ ಹಾಗೂ ಅಮೆರಿಕಾದಲ್ಲಿನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದಲ್ಲಿದ್ದ ಪ್ರತಿಕೂಲ ಹವಾಮಾನ ಸ್ಥಿತಿಯ ನಡುವೆಯೂ ವಿಮಾನದಲ್ಲಿದ್ದ 370 ಪ್ರಯಾಣಿಕರ ಜೀವನವನ್ನು ಉಳಿಸುವಲ್ಲಿ ಏರ್ ಇಂಡಿಯಾ ಪೈಲಟ್ ಯಶಸ್ವಿಯಾಗಿದ್ದಾರೆ. ಈ ಮುಖೇನ ಅವರ ದಿಟ್ಟ ಕಾರ್ಯಕ್ಷಮತೆಗೆ ಶಹಬಾಸ್ ಗಿರಿ ಪಡೆದಿದ್ದಾರೆ.
ಸೆಪ್ಟೆಂಬರ್ 11ರಂದು ಏರ್ ಇಂಡಿಯಾದ AI-101 ವಿಮಾನ ದೆಹಲಿಯಿಂದ ನ್ಯೂಯಾರ್ಕ್ ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಯಾವುದೇ ಪೈಲಟ್ ಊಹಿಸಲು ಸಹ ಬಯಸದ ಕೆಟ್ಟ ಪರಿಸ್ಥಿತಿಗೆ ಪೈಲಟ್ ಸಿಕ್ಕಿಹಾಕಿಕೊಂಡಿದ್ದರು.
ವಿಮಾನದಲ್ಲಿ ಇಂಧನ ಕೊರತೆ ಎದುರಾಗಿತ್ತು, ತಾಂತ್ರಿಕ ತೊಂದರೆ ಸಹ ಕಾಣಿಸಿಕೊಂಡಿತ್ತು. ಇದೆಲ್ಲದರ ಕುರಿತಂತೆ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೆಪೈಲಟ್ ವರದಿ ಮಾಡಿದ್ದರು.ವಿಮಾನ ನಿಲ್ದಾಣದ ಆಕಾಶದಲ್ಲಿ ದಟ್ಟ ಮೋಡಗಳು ಆವರಿಸಿದ್ದವು ಅಲ್ಲದೆ ನಿಲ್ದಾಣದಲ್ಲಿ ಇಳಿಯುವ ವಿಮಾನಕ್ಕೆ ನಿಖರ ಪಾಯಿಂಟ್ ತಿಳಿಯಲು ಅನುವಾಗುವಂತೆ ಇರಿಸಲಾಗುವ ಮೂರು ಇನ್ ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಮ್ ಗಳು ಸಹ ವಿಫಲವಾಗಿದ್ದವು.
ಇಂತಹಾ ಹತಾಶ ಪರಿಸ್ಥಿತಿಯಲ್ಲಿಯೂ ಜೀಫ್ ಕೆ ವಿಮಾನ ನಿಲ್ದಾಣದಲ್ಲಿ ವಿಮಾನವನ್ನಿಳಿಸಲು ಸಾಧ್ಯವಾಗದೆ ಹೋದರೂ ನೆವಾರ್ಕ್ ನ ಪರ್ಯಾಯ  ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದು 370 ಪ್ರಯಾಣಿಕರ ಜೀವವನ್ನು ರಕ್ಷಿಸಿದ್ದಾರೆ.
ಇಂತಹಾ ವಿಶೇಷ ಸಂದರ್ಭವ್ಚನ್ನು ಹೇಗೆ ನಿಭಾಯಿಸಬೇಕೆಂದು ಏರ್ ಇಂಡಿಯಾ ಪೈಲಟ್ ಗಳಿಗೆ ತರಬೇತಿ ಸಮಯದಲ್ಲಿ ಸಹ ಹೇಳಿರುವುದಿಲ್ಲ.ಏರ್ ಇಂಡಿಯಾಗೆ ವಿಮಾನ ಪೂರೈಕೆ ಮಾಡುವ ಬೋಯಿಂಗ್ ಸಂಸ್ಥೆ ಕೈಪಿಡಿಯಲ್ಲಿಯೂ ಈ ಕುರಿತಂತೆ ಮಾಹಿತಿ ಇಲ್ಲ ಎನ್ನುವುದು ಇಲ್ಲಿ ಗಮನಾರ್ಹ ಅಂಶ.
ಸುದ್ದಿ ಖಚಿತಪಡಿಸಿರುವ  ಇಂಡಿಯಾ ವಕ್ತಾರ ಪ್ರವೀಣ್ ಭಟ್ನಾಗರ್"ನ್ಯೂಯಾರ್ಕ್ ಘಟನೆ ಕುರಿತು ವಿಮಾನ ಸುರಕ್ಷತಾ ಇಲಾಖೆ  ತನಿಖೆ ಮಾಡುತ್ತಿದೆ, ಏರ್ ಇಂಡಿಯಾ ಪೈಲಟ್ ಗಳು ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ." ಎಂದರು.
SCROLL FOR NEXT