ವರನಿಗೆ ಗೆಳೆಯರಿಂದ ಸ್ಪೆಷಲ್ ಗಿಫ್ಟ್ 
ದೇಶ

ತಮಿಳುನಾಡು: ವರನಿಗೆ ಗೆಳೆಯರಿಂದ ಸ್ಪೆಷಲ್ ಗಿಫ್ಟ್; 5 ಲೀಟರ್ ಪೆಟ್ರೋಲ್!

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾಗಿರುವ ದಿನಗಳಲ್ಲಿ ತಮಿಳುನಾಡಿನ ಕುದ್ದಲೂರಿನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ವರನಿಗೆ ಆತನ ಗೆಳೆಯರು 5 ಲೀಟರ್ ಪೆಟ್ರೋಲ್ ನ್ನು ಸ್ಪೆಷಲ್ ಗಿಫ್ಟ್ ಆಗಿ ನೀಡಿದ್ದಾರೆ.

ಚೆನ್ನೈ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾಗಿರುವ ದಿನಗಳಲ್ಲಿ ತಮಿಳುನಾಡಿನ ಕುದ್ದಲೂರಿನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ  ವರನಿಗೆ ಆತನ ಗೆಳೆಯರು 5 ಲೀಟರ್ ಪೆಟ್ರೋಲ್ ನ್ನು  ಸ್ಪೆಷಲ್ ಗಿಫ್ಟ್ ಆಗಿ ನೀಡಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಭಾರತ್ ಬಂದ್ ನಡೆಸಿದ್ದರೂ ಕೂಡಾ ಏನೂ ಪ್ರಯೋಜನವಾಗಿಲ್ಲ, ತೈಲ ಬೆಲೆ ಏರುತ್ತಲ್ಲೇ ಇದ್ದು, ಗ್ರಾಹಕರ ಜೇಬು ಸುಡುತ್ತಿದೆ.

 ಇಂತಹ ದುಬಾರಿ ದುನಿಯಾದಲ್ಲಿ  ವಿವಾಹವಾಗುತ್ತಿರುವ ನವ ಜೋಡಿ ಹರಸಲು ಬಂದಿದ್ದ ಸ್ನೇಹಿತರು  ಅರತಕ್ಷತೆಯಲ್ಲಿ ಐದು ಲೀಟರ್  ಪೆಟ್ರೋಲ್  ಗಿಫ್ಟ್ ನೀಡಿದ್ದಾರೆ ಎಂದು ಪುತಿಯಾ ತಲೈಮುರೈ ತಮಿಳು ವಾಹಿನ ಸುದ್ದಿ ವರದಿ ಮಾಡಿದೆ.

ತಮ್ಮ ಸ್ನೇಹಿತರಿಂದ  ಪೆಟ್ರೋಲ್ ಗಿಪ್ಟ್  ಪಡೆಯುತ್ತಿರುವ 39 ಸೆಕೆಂಡ್ ಗಳ ವಿಡಿಯೋ ವನ್ನು ಸುದ್ದಿವಾಹಿನಿಯಲ್ಲಿ ತೋರಿಸಲಾಗಿದೆ.

ತಮಿಳುನಾಡಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 85.15 ರೂ. ಆಗಿದೆ. ಇಂತಹ ಸಂದರ್ಭದಲ್ಲಿ ಮೌಲ್ಯಯುತ ವಸ್ತುವನ್ನು ಗಿಪ್ಟ್ ಆಗಿ ನೀಡಬೇಕೆಂಬ ಉದ್ದೇಶದಿಂದ ಐದು ಲೀಟರ್ ಪೆಟ್ರೋಲ್ ಅನ್ನು ವಿಶೇಷ  ಗಿಪ್ಟ್ ಆಗಿ ನೀಡಲಾಗಿದೆ ಎಂದು ಸ್ನೇಹಿತರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT