ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 68ನೇ ವರ್ಷಕ್ಕೆ ಕಾಲಿಟ್ಟಿದ್ದು ತಮ್ಮ ಹುಟ್ಟುಹಬ್ಬವನ್ನು ಲೋಕಸಭೆ ಕ್ಷೇತ್ರವಾದ ವಾರಾಣಾಸಿಯಲ್ಲಿ ಶಾಲಾ ಮಕ್ಕಳ ಜತೆ ಆಚರಿಸಿಕೊಳ್ಳಲಿದ್ದಾರೆ.
ಇಂದು ಮತ್ತು ನಾಳೆ ಪ್ರಧಾನಿಯ ವಾರಾಣಾಸಿ ಭೇಟಿ ನಿಗದಿಯಾಗಿದ್ದು, ಕಾಶಿ ವಿಶ್ವನಾಥ ದೇಗುಲದಲ್ಲಿ ಅವರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಬಳಿಕ ಶಾಲಾ ಮಕ್ಕಳ ಜತೆ ಕಾಲ ಕಳೆಯಲಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವಿಟರ್ ಮೂಲಕ ಪ್ರಧಾನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಮೋದಿ ಅವರಿಗೆ ದೀರ್ಘಾಯುಷ್ಯ ದೇಶಕ್ಕೆ ಇನ್ನಷ್ಟು ಸೇವೆ ದೊರೆಯಲಿ ಎಂದು ಆಶಿಸಿದ್ದಾರೆ.
ಮೋದಿ ಸಂಪುಟ ಸಚಿವ ಅರುಣ್ ಜೈಟ್ಲಿ, ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಟ್ವಿಟ್ಟರ್ ನಲ್ಲಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.