ಸಂತ್ರಸ್ತ ಮಹಿಳೆ ಹುಮಾ ಸಾಯಿರಾ 
ದೇಶ

ವಾಟ್ಸಪ್ ನಲ್ಲಿ 29 ವರ್ಷದ ಪತ್ನಿಗೆ 62 ವರ್ಷದ ಪತಿಯಿಂದ ತ್ರಿವಳಿ ತಲಾಖ್!

ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂಬ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಭೆ ಅಸ್ತು ಎಂದ ಬೆನ್ನಲ್ಲೇ 29 ವರ್ಷದ ಮಹಿಳೆಗೆ 62ರ ಪತಿ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ.

ಹೈದರಾಬಾದ್: ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂಬ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಭೆ ಅಸ್ತು ಎಂದ ಬೆನ್ನಲ್ಲೇ 29 ವರ್ಷದ ಮಹಿಳೆಗೆ 62ರ ಪತಿ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ. 
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಮತ್ತು ವಾಟ್ಸಪ್ ನಲ್ಲಿ ತ್ರಿವಳಿ ತಲಾಖ್ ನೀಡಿತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂತಹುದೇ ಮತ್ತೊಂದು ಪ್ರಕರಣ ಹೈದರಾಬಾದ್ ನಲ್ಲಿ ವರದಿಯಾಗಿದೆ. ಅದೂ ಕೂಡ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂಬ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಭೆ ಅಸ್ತು ಎಂದ ಬೆನ್ನಲ್ಲೇ 29 ವರ್ಷದ ಮಹಿಳೆಗೆ 62ರ ಪತಿ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ. 
ಹೈದರಾಬಾದ್‍ನ ಹುಮಾ ಸಾಯಿರಾ ಎಂಬಾಕೆಯನ್ನು ಓಮನ್ ಮೂಲದ ಶೇಕ್ ಘಬಿಶ್‍ ಸೈದ್ ನಸಿಬ್ ಅಲ್ ಜಲ್ಬೊಬಿ ಎಂಬುವವರು 2017ರ ಮೇ ನಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಒಂದು ವರ್ಷದವರೆಗೂ ಅವರು ಪತಿ ಜತೆ ಓಮನ್‍ನಲ್ಲಿ ವಾಸಿಸುತ್ತಿದ್ದರು. ಅಲ್ಲದೆ ಗಂಡನಿಂದ ಕಿರುಕುಳಕ್ಕೊಳಗಾದರೂ ರಾಜಿ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು. ಬಳಿಕ ಸಾಯಿರಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅನಾರೋಗ್ಯದಿಂದ ಮಗು ಮೂರು ತಿಂಗಳಲ್ಲೇ ಮೃತಪಟ್ಟಿತ್ತು. ಹೀಗಾಗಿ ಗಂಡ ವಾಪಸ್ ಭಾರತಕ್ಕೆ ಹೋಗುವಂತೆ ಪೀಡಿಸುತ್ತಿದ್ದನಂತೆ.
ಸಾಯಿರಾ ಕೂಡ ವೈದ್ಯಕೀಯ ಚಿಕಿತ್ಸೆಗಾಗಿ 2018ರ ಜುಲೈ 30ರಂದು ಭಾರತಕ್ಕೆ ಮರಳಿದ್ದರು. ಇದೀಗ ವಾಟ್ಸಾಪ್‍ ನಲ್ಲಿ ತಲಾಖ್ ನೀಡಿರುವ ಮೆಸೇಜ್ ಕಳುಹಿಸಿದ್ದಾರೆ ಎಂದು ಮಹಿಳೆ ಕಣ್ಣೀರಿಡುತ್ತಿದ್ದಾರೆ. ಇನ್ನು ಈ ವಿಚಾರದ ಬಗ್ಗೆ ಮಹಿಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯ ಯಾಚಿಸಿದ್ದಾರೆ. ತನ್ನ ಮೆಸೇಜ್ ಗಳನ್ನು ಪತಿ ನಿರ್ಲಕ್ಷಿಸುತ್ತಿದ್ದು, ಅವರ ಬಳಿ ತಲಾಖ್ ಮಾಡಿರುವ ಕುರಿತಾಗಿ ಪ್ರಶ್ನೆಗಳನ್ನು ಕೇಳಬೇಕಿದೆ ಎಂದು ಸಾಯಿರಾ ತಿಳಿಸಿದ್ದಾರೆ. ಅಲ್ಲದೆ ‘ಇಂಥ ಜನರು ಬಡ ಮಹಿಳೆಯರ ಜೀವನದಲ್ಲಿ ಆಟವಾಡುತ್ತಿದ್ದಾರೆ. ಅವರಿಗೆ ಬೇಕು ಎಂದಾಗ ಮದುವೆಯಾಗುತ್ತಾರೆ. ಮೋಜು ತೀರಿದ ಬಳಿಕ ತಲಾಖ್ ನೀಡುತ್ತಾರೆ. ನಾನೀಗ ಎಲ್ಲಿಗೆ ಹೋಗಬೇಕು..? ಇಂಥವರು ನಮ್ಮಿಂದ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಸಾಯಿರಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!