ಅರುಣ್ ಜೇಟ್ಲಿ 
ದೇಶ

ರಾಹುಲ್‌ ಗಾಂಧಿ 'ಬಫೂನ್ ರಾಜ' ಎಂದು ಜರಿದ ಅರುಣ್ ಜೇಟ್ಲಿ

ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಪೇದ ಪದೇ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ 'ಬಫೂನ್ ರಾಜ'....

ದೆಹಲಿ: ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಪೇದ ಪದೇ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ 'ಬಫೂನ್ ರಾಜ' ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಂಗ್ಯವಾಡಿದ್ದಾರೆ.
ಫೇಸ್ ಬುಕ್ ನಲ್ಲಿ ಸುಳ್ಳುಗಳ 'ಬಫೂನ್ ರಾಜ' ಎಂಬ ' ಎಂಬ ಟೈಟಲ್ ನೊಂದಿಗೆ ಕಾಂಗ್ರೆಸ್ ಅಧ್ಯಕ್ಷರನ್ನು ಕಟುವಾಗಿ ಟೀಕಿಸಿರುವ ಅರುಣ್ ಜೇಟ್ಲಿ, ರಾಫೆಲ್ ಡೀಲ್ ಮತ್ತು 15 ಉದ್ಯಮ ಸಂಸ್ಥೆಗಳ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನಿರಂತರವಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ ಎಂದರು.
ಸುಳ್ಳುಗಳ ಕತೆ ಹೆಣೆದು ಅದನ್ನು ಆದಷ್ಟೂ ಬಾರಿ ಪುನರಾವರ್ತನೆ ಮಾಡುವುದೇ ಅವರ ತಂತ್ರ. ಅವರು ತಮ್ಮ ಈ ಸುಳ್ಳು ಆರೋಪಗಳಿಗೆ ಸುಳ್ಳು ದಾಖಲೆಗಳನ್ನಾದರೂ ಒದಗಿಸಬೇಕು. ಇಲ್ಲವಾದರೇ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ ಎಂದಿದ್ದಾರೆ.
ಸಾರ್ವಜನಿಕವಾಗಿ ಉಪನ್ಯಾಸ ನೀಡುವುದು ಗಂಭೀರ ಚಟುವಟಿಕೆಯಾಗಬೇಕೇ ಹೊರತು ನಗೆಪಾಟಲಿನ ಸವಾಲಾಗಬಾರದು. ರಾಹುಲ್ ಅವರೇ ನೀವು ಪ್ರತಿಯೊಂದು ವಿಷಯದಲ್ಲೂ ಸುಳ್ಳನ್ನೇ ಪ್ರತಿಪಾದಿಸುತ್ತಾ ಬಂದಿದ್ದೀರಿ. ಸುಳ್ಳನ್ನು ನಂಬಬೇಕು ಎನ್ನುವುದು ಸಾರ್ವಜನಿಕ ಉಪನ್ಯಾಸದ ಸ್ವಾಭಾವಿಕ ಆದ್ಯತೆಯಾಗಬೇಕೇ? ಸಾರ್ವಜನಿಕ ಉಪನ್ಯಾಸ ಎನ್ನುವುದು ಗಂಭೀರ ಚಟುವಟಿಕೆಯಾಗಬೇಕೇ ಹೊರತು ನಗೆಪಾಟಲಿನ ಸಂಗತಿಯಾಗಬಾರದು.
ರಾಫೆಲ್ ಯುದ್ಧ ವಿಮಾನ ಖರೀದಿ ಕುರಿತು ಮೊದಲ ಸುಳ್ಳು. ಪ್ರಧಾನಿ ಮೋದಿ ಉದ್ಯಮಿಗಳ 2.5 ಲಕ್ಷ ಕೋಟಿ ರುಪಾಯಿಗಳ ಸಾಲ ಮನ್ನಾ ಮಾಡಿದ್ದಾರೆ ಎನ್ನುವುದು ಎರಡನೇ ಸುಳ್ಳು. ರಾಹುಲ್ ಗಾಂಧಿ ಪ್ರತಿಯೊಂದು ವಾಕ್ಯದ ಪ್ರತಿ ಪದವೂ ಸುಳ್ಳು ಎಂದು ಅರುಣ್ ಜೇಟ್ಲಿ ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ