ದೇಶ

ತ್ರಿವಳಿ ತಲಾಖ್: ಕುರಾನ್ ಮಾತ್ರವೇ ಸರ್ವೋಚ್ಛ, ಸಂವಿಧಾನ, ಕಾನೂನು ಲೆಕ್ಕಕ್ಕೆ ಇಲ್ಲ: ಪಶ್ಚಿಮ ಬಂಗಾಳ ಸಚಿವ

Srinivas Rao BV
ಕೋಲ್ಕತ್ತಾ: ತ್ರಿವಳಿ ತಲಾಖ್ ನ್ನು ಶಿಕ್ಷಾರ್ಹಗೊಳಿಸಿರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಪಶ್ಚಿಮ ಬಂಗಾಳ ಸಚಿವ ಸಿದ್ದಿಕ್-ಉಲ್ಲ್ಹ್-ಚೌಧರಿ ವಿರೋಧಿಸಿದ್ದಾರೆ. 
ಕುರಾನ್ ಷರೀಫ್ ಅಂತಿಮವೇ ಹೊರತು ಯಾವುದೇ ಕಾನೂನು, ಸಂವಿಧಾನಿಕ ಅಂತಿಮವಲ್ಲ,  ರಾಜ್ಯದಲ್ಲಿರುವ ಹಲವು ಮುಸ್ಲಿಂ ಸಂಘಟನೆಗಳು ಈ ಸುಗ್ರೀವಾಜ್ಞೆಯ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಿದ್ದಿಕ್-ಉಲ್- ಚೌಧರಿ ಹೇಳಿದ್ದಾರೆ. ಯಾವುದೇ ಕಾನೂನು, ಸಂವಿಧಾನವೂ ಅಂತಿಮವಲ್ಲ ಕುರಾನ್ ಒಂದೇ ಅಂತಿಮವಾದದ್ದು, ಅಂತಿಮ ಗೆಲುವು ಸಹ ಕುರಾನ್ ನದ್ದೇ.  ನಮಗೆ ಕುರಾನ್ ಧಾರ್ಮಿಕ ಗ್ರಂಥವೇ ಸರ್ವೋಚ್ಛ, ಯಾರೂ ಸಹ ಧಾರ್ಮಿಕ ವಿಚಾರಗಳಲ್ಲಿ ಮೂಗು ತೂರಿಸುವುದನ್ನು ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರು ಸಹಿಸುವುದಿಲ್ಲ ಎಂದು ಚೌಧರಿ ಎಚ್ಚರಿಸಿದ್ದಾರೆ. 
ಬಿಜೆಪಿ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಸಂವಿಧಾನದೊಂದಿಗೆ ಆಟವಾಡುತ್ತಿದೆ. ಈ ಸುಗ್ರೀವಾಜ್ಞೆ ಮುಸ್ಲಿಮರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಚೌಧರಿ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ತ್ರಿವಳಿ ತಲಾಖ್ ನಿಷೇಧಿಸುವುದರ ಕುರಿತು ಹೇಳಿಕೆ ನೀಡಿದ್ದ ಚೌಧರಿ, ಸುಪ್ರೀಂ ಕೋರ್ಟ್ ತೀರ್ಪನ್ನೇ ಅಸಾಂವಿಧಾನಿಕ ಎಂದಿದ್ದರು. 
SCROLL FOR NEXT