ಮನವೇಂದ್ರ ಸಿಂಗ್ ಗೋಹಿಲ್ 
ದೇಶ

ದೇಶದ ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್‌ ಮಾಡಲು ಬಯಸಿದ್ದರು: ಸಲಿಂಗಿ ರಾಜ ಮನವೇಂದ್ರ

ದೇಶದ ಹಲವು ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್ ಮಾಡಲು ಬಯಸಿದ್ದರು ಎಂದು ಗುಜರಾತ್ ರಾಜಪೀಪ್ಲಾದ ಸಲಿಂಗಿ ರಾಜ ಮನ್ವೇಂದರ್ ಸಿಂಗ್ ಗೋಹಿಲ್ ಹೇಳಿದ್ದು ಈ ಹೇಳಿಕೆ...

ವಡೋದರ: ದೇಶದ ಹಲವು ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್ ಮಾಡಲು ಬಯಸಿದ್ದರು ಎಂದು ಗುಜರಾತ್ ರಾಜಪೀಪ್ಲಾದ ಸಲಿಂಗಿ ರಾಜ ಮನ್ವೇಂದರ್ ಸಿಂಗ್ ಗೋಹಿಲ್ ಹೇಳಿದ್ದು ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 
ತಾನು ಸಲಿಂಗಿ ರಾಜ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ಮನ್ವೇಂದರ್ ಅವರು ಆನಂದ್ ಜಿಲ್ಲೆಯ ವಲ್ಲಭ ವಿದ್ಯಾನಗರ್ ನಲ್ಲಿನ ಸರ್ದಾರ್ ಪಟೇಲ್ ಯುನಿವರ್ಸಿಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. 
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಸಲಿಂಗಿ ವಿವಾಹ ತಪ್ಪಲ್ಲ ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಇದನ್ನು ಉದ್ದೇಶಿಸಿ ಮಾತನಾಡಿದ ಅವರು, 2013ರಲ್ಲಿ ಕೆಲ ಧಾರ್ಮಿಕ ಮುಖಂಡರು ನಮ್ಮ ವಿರುದ್ಧವಾಗಿ ಮಾತನಾಡಿದ್ದರು. ಇವೆಲ್ಲಾ ವಿದೇಶಗಳಲ್ಲಿ ನಡೆಯುತ್ತದೆ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ನಮ್ಮ ವಿರುದ್ಧ ಹೋರಾಡಲು ದೇಶದಲ್ಲಿನ ಹಿಂದೂಗಳು, ಮುಸ್ಲಿಂರು ಮತ್ತು ಕ್ರೈಸ್ತರು ಒಟ್ಟಾಗಿದ್ದರು. ಸಲಿಂಗಿ ವಿವಾಹ ಅಸ್ವಾಭಾವಿಕ ಅಪರಾಧಗಳು ಎಂದು ವಾದಿಸಿದ್ದರು ಎಂದು ಹೇಳಿದರು. 
ಸಲಿಂಗಿ ಸೆಕ್ಸ್ ಅಪರಾಧ ಎಂದು ವಾದಿಸುವ ಧಾರ್ಮಿಕ ಮುಖಂಡರೇ ನನ್ನ ಜೊತೆ ಸೆಕ್ಸ್ ಮಾಡಬೇಕು ಎಂದು ಬಯಸಿದ್ದು ಇದು ನಮ್ಮ ವಿರುದ್ಧ ಅವರ ಹೋರಾಟ ಬರೀ ಬೂಟಾಟಿಕೆ ಎಂದು ಹೇಳಿದರು.
ಇನ್ನು ಹಲವು ಧಾರ್ಮಿಕ ಮುಖಂಡರು ನಮ್ಮ ಬಳಿ ಬಂದು ನಿಮ್ಮ ಜೊತೆ ಸೆಕ್ಸ್ ಮಾಡಬೇಕು ಎಂದು ಕೇಳಿಕೊಂಡಿದ್ದರು. ಇನ್ನು ವಾಸ್ತವವಾಗಿ ಎಚ್ಐವಿ ಪರೀಕ್ಷೆ ಮಾಡಿದರೇ ಕೆಲ ಆಶ್ರಮಗಳನ್ನು ಗುರಿಪಡಿಸುತ್ತೇನೆ. ಅಲ್ಲಿ ನನ್ನ ಸ್ವಯಂಸೇವಕರು ಮತ್ತು ಸಿಬ್ಬಂದಿಗಳು ಈ ಆಶ್ರಮದಲ್ಲಿ ಹೋಗುತ್ತಾರೆ ಮತ್ತು ಅಲ್ಲಿ ಎಚ್ಐವಿ ಸೋಕಿಂತ ವ್ಯಕ್ತಿಗಳು ಇರುವುದರಿಂದ ಎಚ್ಐವಿ ಪರೀಕ್ಷೆಗಳನ್ನು ನಡೆಸಲು ನಾನು ಕೇಳಿಕೊಳ್ಳುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!