ದೇಶ

ಭಾರತ ಮತ್ತೊಂದು ಅವಕಾಶವನ್ನು ಕೈಚೆಲ್ಲಿದೆ: ಯೋಧರ ಹತ್ಯೆ ಹಿಂದೆ ನಮ್ಮ ಕೈವಾಡ ಇಲ್ಲ: ಪಾಕಿಸ್ತಾನ

Srinivas Rao BV
ಇಸ್ಲಾಮಾಬಾದ್: ನಿಗದಿಯಾಗಿದ್ದ ಭಾರತ-ಪಾಕ್ ವಿದೇಶಾಂಗ ಸಚಿವರ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಿರುವ ಬಗ್ಗೆ ಪಾಕಿಸ್ತನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ, " ಭಾರತ ಮತ್ತೊಂದು ಅವಕಾಶವನ್ನು ಕೈಚೆಲ್ಲಿದೆ. ಮಾತುಕತೆ ರದ್ದುಗೊಳಿಸುವುದಕ್ಕೆ ಭಾರತ ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲ. ಬಿಎಸ್ ಎಫ್ ಯೋಧರ ಹತ್ಯೆ ಹಿಂದೆ ನಮ್ಮ ಕೈವಾಡವೇನು ಇಲ್ಲ" ಎಂದು ಪಾಕಿಸ್ತಾನ ಹೇಳಿದೆ.
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಉಗ್ರರ ಸಮಸ್ಯೆ ಉಲ್ಬಣವಾಗುತ್ತಿದ್ದು, ಪೊಲೀಸರನ್ನು ಉಗ್ರರು ಹತ್ಯೆ ಮಾಡಿದ ಬೆನ್ನಲ್ಲೆ ಭಾರತ, ಪಾಕಿಸ್ತಾನದೊಂದಿಗಿನ ಮಾತುಕತೆಯನ್ನು ರದ್ದುಗೊಳಿಸಿತ್ತು. ಭಾರತ ಮಾತುಕತೆ ರದ್ದುಗೊಳಿಸುವುದಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಘಟನೆಗಳು, ಭಾರತ ಮಾತುಕತೆಗೆ ಒಪ್ಪಿಗೆ ಸೂಚಿಸುವ ಮುನ್ನವೇ ನಡೆದಿರುವ ಘಟನೆಗಳಾಗಿವೆ ಆದರೆಮ್ ಭಾರತ ಮತ್ತೊಮ್ಮೆ ಮಾತುಕತೆ ನಿರಾಕರಿಸುವ ಮೂಲಕ ಮತ್ತೊಂದು ಅವಕಾಶವನ್ನು ಕೈಚೆಲ್ಲಿದೆ, ಇದರಿಂದ ಪಾಕಿಸ್ತಾನಕ್ಕೆ ತೀವ್ರ ಬೇಸರ ಉಂಟಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ. 
SCROLL FOR NEXT