ಸಂಗ್ರಹ ಚಿತ್ರ 
ದೇಶ

ಜೀವದ ಹಂಗು ತೊರೆದು ಕಳ್ಳರಿಂದ ರಕ್ಷಿಸಿದ್ದಕ್ಕೆ ಬರೀ ಟೀ ಶರ್ಟ್ ಗಿಫ್ಟ್, ಸಿಟ್ಟಿಗೆದ್ದು ಮಾಲೀಕನಿಂದ 70 ಲಕ್ಷ ಕದ್ದು ಪರಾರಿ!

ಮಾಲೀಕನ ಹಣದ ಬ್ಯಾಗ್ ಅನ್ನು ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದ ಕಳ್ಳರ ಜೊತೆ ಸೆಣೆಸಾಡಿ ರಕ್ಷಿಸಿದ್ದ ನೌಕರನಿಗೆ ಮಾಲೀಕ ಬರೀ ಟೀ ಶರ್ಟ್ ವೊಂದನ್ನು...

ನವದೆಹಲಿ: ಮಾಲೀಕನ ಹಣದ ಬ್ಯಾಗ್ ಅನ್ನು ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದ ಕಳ್ಳರ ಜೊತೆ ಸೆಣೆಸಾಡಿ ರಕ್ಷಿಸಿದ್ದ ನೌಕರನಿಗೆ ಮಾಲೀಕ ಬರೀ ಟೀ ಶರ್ಟ್ ವೊಂದನ್ನು ಬಹುಮಾನವಾಗಿ ಕೊಟ್ಟಿದ್ದು ಇದರಿಂದ ಬೇಸರಗೊಂಡ ಆತ ನಂತರ ಮಾಲೀಕನಿಂದ 70 ಲಕ್ಷ ರುಪಾಯಿ ಕದ್ದು ಪರಾರಿಯಾಗಿದ್ದಾನೆ. 
ಹಣ ಕದ್ದು ಪರಾರಿಯಾಗಿರುವ ಆರೋಪಿಯನ್ನು ಧನ್ ಸಿಂಗ್ ಬಿಶ್ತ್ ಎಂದು ಗುರುತಿಸಲಾಗಿದೆ. ಬಿಶ್ತ್ ತನ್ನ ಸ್ನೇಹಿತ ಯಾಕೂಬ್ ಜತೆಗೆ ಸೇರಿ ಮೊತ್ತದ ಕಳ್ಳತನ ಮಾಡಿ ನೈನಿತಾಲ್ ಗೆ ಪರಾರಿಯಾಗಿದ್ದ. ಯಾಕೂಬ್ ಇತ್ತೀಚೆಗೆ ದೆಹಲಿಗೆ ಬಂದಿದ್ದು ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ಕಳ್ಳತಕ್ಕೆ ಕಾರಣ ತಿಳಿದುಬಂದಿದೆ. 
ಬಿಶ್ತ್ ಮಾಲೀಕ ಒಮ್ಮೆ 80 ಲಕ್ಷ ರುಪಾಯಿ ಹಣದೊಂದಿಗೆ ಹೋಗುತ್ತಿದ್ದಾಗ ಕಳ್ಳರು ದಾಳಿ ಮಾಡಿದ್ದರು. ಈ ವೇಳೆ ಬಿಶ್ತ್ ಅವರಿಂದ ಮಾಲೀಕನನ್ನು ಹಾಗೂ ಹಣವನ್ನು ಕಾಪಾಡಿದ್ದ. ಈ ಘಟನೆಯಲ್ಲಿ ಗಾಯಗೊಂಡಿದ್ದ ಆತ ತನ್ನ ಸಾಹಸಕ್ಕೆ ಪ್ರತಿಯಾಗಿ ದೊಡ್ಡ ಮೊತ್ತದ ನಗದು ಬಹುಮಾನ ಸಿಗುತ್ತದೆ ಎಂದು ನಿರೀಕ್ಷಿಸಿದ್ದ ಆದರೆ ಮಾಲೀಕ ಟೀ ಶರ್ಟ್ ಕೊಟ್ಟು ಸುಮ್ಮನಾಗಿದ್ದ ಇದರಿಂದ ಬಿಶ್ತ್ ಅಸಮಾದಾನಗೊಂಡಿದ್ದ. 
ಬಿಶ್ತ್ ಗಾಯಗೊಂಡು ಹಾಸಿಗೆ ಹಿಡಿದಿದ್ದು ಮೂವರು ಹೆಣ್ಣು ಮಕ್ಕಳ ಮದುವೆ ಮಾಡುವ ಜವಾಬ್ದಾರಿ ಆತನ ಮೇಲಿತ್ತು. ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡರು ದುಡಿದು ಮಕ್ಕಳ ಮದುವೆ ಮಾಡಿಸಲು ತನ್ನಿಂದ ಸಾಧ್ಯವಿಲ್ಲವೆಂದು ಯೋಚಿಸಿದ ಆತ ತನ್ನ ಮಾಲೀಕ ಹಣವನ್ನು ಬ್ಯಾಂಕ್ ಗೆ ಡಿಪಾಸಿಟ್ ಮಾಡಲು ಹೇಳಿದಾಗ ಕದ್ದು ಪರಾರಿಯಾಗಲು ನಿರ್ಧರಿಸಿದ ಎಂದು ಪೊಲೀಸ್ ವಿಚಾರಣೆ ವೇಳೆ ಯಾಕೂಬ್ ಹೇಳಿದ್ದಾನೆ. 
ಆಗಸ್ಟ್ 28ರಂದು ಬಿಶ್ತ್ ನ ಮಾಲೀಕರ ಹಣ ತರುವಂತೆ ಕಳುಹಿಸಿದ್ದ ಈ ಹಣ ಪಡೆದ ಬಿಶ್ತ್ ತನ್ನ ಸ್ನೇಹಿತ ಯಾಕೂಬ್ ನನ್ನು ಸಂಪರ್ಕಿಸಿ ಆತನ ಮನೆಯಲ್ಲಿ ತನ್ನ ಬೈಕ್ ಅನ್ನು ನಿಲ್ಲಿಸಿ ನಂತರ ಇಬ್ಬರು ಕಾರಿನಲ್ಲಿ ನೈನಿತಾಲ್ ಗೆ ಪರಾರಿಯಾಗಿದ್ದರು. 
ಯಾಕೂಬ್ ಬಿಶ್ತ್ ನನ್ನು ನೈನಿತಾಲ್ ತಲುಪಿಸಿ ದೆಹಲಿಗೆ ಬಂದು ಆತನ ಬೈಕ್ ಮಾರಿ ಮರಳಿ ನೈನಿತಾಲ್ ಗೆ ಹೋಗಲು ಪ್ರಯತ್ನಿಸುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT