ಮುಂಬೈ: ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅನಾರೋಗ್ಯಕ್ಕೀಡಾಗಿದ್ದರೂ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಿರುವ ಬಿಜೆಪಿಯ ಕ್ರಮ "ಕ್ರೂರ ಮತ್ತು ಅಮಾನವೀಯ ರಾಜಕೀಯ" ಎಂದು ಭಾರತೀಯ ಜನತಾ ಪಕ್ಷದ ಸಹವರ್ತಿ ಪಕ್ಷ ಶಿವಸೇನೆ ಟೀಕಾ ಪ್ರಹಾರ ನಡೆಸಿದೆ.
ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಕರಾವಳಿ ರಾಜ್ಯದಲ್ಲಿ ಅರಾಜಕತೆ ಇದೆ. ಅಲ್ಲದೆ ಪರಿಕ್ಕರ್ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದರೆ ಪಕ್ಷ ಎಲ್ಲಿ ತನ್ನ ಅಧಿಕಾರ ಕಳೆದುಕೊಳ್ಳುವುದೋ ಎಂದು ಬಿಜೆಪಿಗೆ ಭೀತಿ ಪ್ರಾರಂಭವಾಗಿದೆ ಎಂದು ಉದ್ಭವ್ ಠಾಕ್ರೆ ನೇತೃತ್ವದ ಪಕ್ಷ ಹೇಳಿದೆ.
62 ವರ್ಷದ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಬಳಲುತ್ತಿದ್ದು ಪ್ರಸ್ತುತ ದೆಹಲಿಯ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
"ಗೋವಾ ಮುಖ್ಯಮಂತ್ರಿ ಗೋವಾದಲ್ಲಿಲ್ಲ, ಅವರು ದೆಹಲಿಯಲ್ಲಿ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ರಾಜ್ಯಾಡಳಿತ ಕಳೆಗುಂದಿದೆ" ಶಿವಸೇನಾ ನೇತೃತ್ವದ ಪತ್ರಿಕೆ ಸಾಮ್ನಾ ತನ್ನ ಸಂಪಾದಕೀಯ ಬರಹದಲ್ಲಿ ವಿವರಿಸಿದ್ದೆ.
"ಅನಾರೋಗ್ಯಕ್ಕೀಡಾಗಿರುವ ಪರಿಕ್ಕರ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸದಿರುವುದು, ಅವರ ಅನುಪಸ್ಥಿತಿಯಲ್ಲಿಯೂ ಅವರದೇ ಹೆಸರಲ್ಲಿ ಆಡಳಿತ ನಡೆಸುತ್ತಿರುವುದು ರಾಜ್ಯದ ಜನತೆಗೆ ಮಾಡುವ ದ್ರೋಹವಷ್ಟೇ ಅಲ್ಲ ಸ್ವತಃಅ ಪರಿಕ್ಕರ್ ಅವರಿಗೆ ಂಆಡಿದ ದ್ರೋಹ.ಅನಾರೋಗ್ಯಪೀಡಿತರಾದವರ ಮುಖ್ಯಮಂತ್ರಿ ಮೇಲೆ ಬಲವಂತವಾಗಿ ಜವಾಬ್ದಾರಿ ಹೇರುವುದು ಕ್ರೂರ ಮತ್ತು ಅಮಾನವೀಯ ರಾಜಕೀಯವಾಗಿದೆ" ಎಂದು ಅದು ಹೇಳಿದೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ವರೆವಿಗೂ ಪರಿಕ್ಕರ್ ಹೆಸರನ್ನು ಚಾಲ್ತಿಯಲ್ಲಿಡುವುದು ಭಾರತೀಯ ಜನತಾ ಪಕ್ಷದ ಉದ್ದೇಶವಾಗಿದೆ.ಅವರ ಆರೋಗ್ಯ ಸ್ಥಿತಿ ಗಮನಿಸಿದರೆ ಇದು ಸೂಕ್ತವಲ್ಲ. ಆದರೆ ಬಿಜೆಪಿ ಹೈಕಮ್ಂಆಡ್ ಗೆ ಇದನ್ನು ತಿಳಿಸಿ ಹೇಳಬಲ್ಲವರು ಯಾರಿದ್ದಾರೆ? ಪರಿಕ್ಕರ್ ಆರೋಗ್ಯಕ್ಕಿಂತಲೂ ಗೋವಾದಲ್ಲಿ ಬಿಜೆಪಿ ಭದ್ರವಾಗಿರಬೇಕು ಎನ್ನುವುದು ಬಿಜೆಪಿ ಪಕ್ಷದ ಬಯಕೆ. ಗೋವಾದಲ್ಲಿ ತಾವೆಲ್ಲಿ ಅಧಿಕಾರ ವಂಚಿತರಾಗುವೆವೋ ಎನ್ನುವ ಭಯ ಆ ಪಕ್ಷಕ್ಕೆ ಹೆಚ್ಚು ಕಾಡಲಾರಂಭಿಸಿದೆ ಎಂದು ಸಾಮ್ನಾ ವರದಿಯಲ್ಲಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics