ನವದೆಹಲಿ: ಭಾರತದಲ್ಲಿ ದಿನ ದಿನಕ್ಕೆ ಅಭಿವೃದ್ದಿಯಾಗುತ್ತಿರುವ ಸ್ಟಾರ್ಟ್ ಅಪ್ ಉದ್ಯಮಕ್ಕೆ ಪ್ರೋತ್ಸಾಹ ನಿಡಲು ಸಾಮಾಜಿಕ ತಾಣ ಫೇಸ್ ಬುಕ್ ಇದೇ ಮೊದಲ ಬಾರಿಗೆ "ಇಂಡಿಯಾ ಸ್ಟಾರ್ಟ್ ಅಪ್ ಡೇ" ಅನ್ನು ಆಯೋಜಿಸಲು ತೀರ್ಮಾನಿಸಿದೆ.
ಅಕ್ಟೋಬರ್ 9ರಂದು ಫೇಸ್ ಬುಕ್ ದೆಹಲಿಯಲ್ಲಿ ಈ ಕಾರ್ಯಕ್ರಮ ನಡೆಸಲಿದೆ.
ಪ್ರಸಕ್ತ ಮತ್ತು ಭವಿಷ್ಯದ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಂಡು ನವೋದ್ಯಮ ಪ್ರಾರಂಭಿಸಿರುವ ಭಾರತೀಯ ನಾಯಕರು, ಸಂಸ್ಥಾಪಕರ ಕಥೆಗಳನ್ನು ಫೇಸ್ ಬುಕ್ ಆ ದಿನದಂದು ಪ್ರಸ್ತುತಪಡಿಸಲಿದೆ.
ಅಲ್ಲದೆ ಅಂದಿನ ಕಾರ್ಯಕ್ರಮದಲ್ಲಿ ಹೊಸ ಪೀಳಿಗೆಗೆ ಇರುವ ಅವಕಾಶಗಳು, ಮತ್ತು ಸವಾಲು, ಪ್ರಮುಖ ವ್ಯಾಪಾರ, ನೀತಿ ಪ್ರಮುಖ ಉದ್ಯಮಪತಿಗಳ ಮಹತ್ವಾಕಾಂಶ್ಕ್ಷೆಯ ಉದ್ಯಮಗಳು ಈ ಕುರಿತಂತೆ ಚರ್ಚಿಸಲಾಗುವುದು ಎಂದು ಸಾಮಾಜಿಕ ತಾಣ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಮೂರನೇ ಅತಿದೊಡ್ಡ ನವೋದ್ಯಮ ತಾಣವಾಗಿ, ಜಾಗತಿಕವಾಗಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಅಭಿವೃದ್ದಿಶೀಲ ರಾಷ್ಟ್ರವಾಗಿ ತಂತ್ರಜ್ಞಾನ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ತ್ವರಿತ ಗತಿಯಲ್ಲಿ ಭಾರತ ದಾಪುಗಾಲಿಕ್ಕುತ್ತಿದೆ ಎಂದು ಫೇಸ್ ಬುಕ್ ಹೇಳಿದೆ.
ಫೇಸ್ ಬುಕ್ ಇದಾಗಲೇ ದೇಶದಲ್ಲಿ ನವೋದ್ಯಮದ ನಾನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಹಲವಾರು ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಮೂಲಕ ಕೈಗಾರಿಕಾ ಕ್ಷೇತ್ರ್ಗಳ ವ್ಯವಹಾರಗಳನ್ನು ಬಲಪಡಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics