ಆಧಾರ್ ವಿವಾದಗಳ ಬಗ್ಗೆ ಇಲ್ಲಿದೆ 7 ಕುತೂಹಲಕಾರಿ ವಿಷಯಗಳು!
ನವದೆಹಲಿ: ಆಧಾರ್ ಕಾರ್ಡ್ ನ ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದು, ಸಾಕಷ್ಟು ವಿವಾದಗಳಿಗೀಡಾಗಿದ್ದ ಆಧಾರ್ ನ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
2016 ರಲ್ಲಿ ಜಾರಿಗೊಂಡ ಆಧಾರ್ ಕಾನೂನಿಗೂ ಮುನ್ನವೇ ಆಧಾರ್ ಗೆ ಸವಾಲುಗಳು ಎದುರಾಗಿದ್ದವು. ಜನಸಾಮಾನ್ಯರ ಪ್ರತಿನಿತ್ಯದ ಬದುಕಿನಲ್ಲಿ ಪಡೆಯಬಹುದಾದ ಸೇವೆಗಳಿಗೆ ಆಧಾರ್ ನ್ನು ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ ಈ ವರೆಗೂ 139 ಅಧಿಸೂಚನೆಗಳನ್ನು ಹೊರಡಿಸಿದೆ. ಆಧಾರ್ ಗೆ ಎದುರಾದ ಸವಾಲು ಹಾಗೂ ವಿವಾದಗಳೇನೆಂಬುದರ ಕುರಿತ ಮಾಹಿತಿ ಇಲ್ಲಿದೆ.
- ಆಧಾರ್ ಡಾಟಾ ಬೇಸ್ ಗೆ ಸಂಬಂಧಿಸಿದಂತೆ ವರದಿ ಪ್ರಕಟಿಸಿದ್ದ ಹುಫಿಂಗ್ ಟನ್ ಪೋಸ್ಟ್, ಬಿಲಿಯನ್ ಗಟ್ಟಲೆ ಬಯೋಮೆಟ್ರಿಕ್ ಹಾಗೂ ವೈಯಕ್ತಿಕ ವಿವರಗಳನ್ನು ಹೊಂದಿರುವ ಆಧಾರ್ ನ ಡಾಟಾ ಬೇಸ್ ಗೆ ಅಗತ್ಯವುರುವ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂಬುದನ್ನು ಬಹಿರಂಗಪಡಿಸಿತ್ತು.
- ಆಧಾರ್ ನ ಹೆಲ್ಪ್ ಲೈನ್ ನಂಬರ್ ಮೊಬೈಲ್ ನಲ್ಲಿ ಬಳಕೆದಾರರ ಅನುಮತಿಯೇ ಇಲ್ಲದೇ ಸೇವ್ ಆಗಿರುವುದು ಸಹ ಆಧಾರ್ ಎದುರಿಸಿದ್ದ ವಿವಾದಗಳಲ್ಲಿ ಒಂದಾಗಿದ್ದು, ಇದನ್ನು ಫ್ರಾನ್ಸ್ ನ ಭದ್ರತಾ ತಜ್ಞರು ಪ್ರಶ್ನಿಸಿದ್ದರು.
- ಟ್ರಾಯ್ ಅಧ್ಯಕ್ಷ ಆರ್ ಎಸ್ ಶರ್ಮಾ ತಮ್ಮ 12 ಅಂಕಿಗಳ ಆಧಾರ್ ನಂಬರ್ ನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ಹ್ಯಾಕರ್ ಗಳಿಗೆ ಸವಾಲೊಡ್ಡಿದ್ದರು. ಕೆಲವೇ ಗಂಟೆಗಳಲ್ಲಿ ಆರ್ ಎಸ್ ಶರ್ಮಾ ಆಧಾರ್ ನ್ನು ಹ್ಯಾಕ್ ಮಾಡಿ ವೈಯಕ್ತಿಕ ವಿವರಗಳನ್ನು ಸಾರ್ವಜನಿಕರ ಮುಂದಿಡಲಾಗಿತ್ತು.
- ಆಧಾರ್ ಗೆ ಸಂಬಂಧಿಸಿದಂತೆ ಋಣಾತ್ಮಕ ಅಂಶಗಳಿಗೆ ಉತ್ತರ ನೀಡುವ ಸಲುವಾಗಿ ಯುಐಡಿಎಐ ಸಾಮಾಜಿಕ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಲು ಮುಂದಾದಾಗಲೂ ವಿವಾದ ಉಂಟಾಗಿತ್ತು.
- ಸೇವೆಗಳನ್ನು ಪಡೆಯುವ ವೇಳೆ ದೇಶದ ನಾಗರಿಕರಿಂದ ಮೆಟಾ ಡಾಟಾವನ್ನು ಏಕೆ ಪಡೆಯುತ್ತೀರಿ ಎಂದು ಸುಪ್ರೀಂ ಕೋರ್ಟ್ ಯುಐಡಿಎಐ ನ ಪ್ರಶ್ನಿಸಿತ್ತು.
- ಸೈಬರ್ ಭದ್ರತಾ ಸಂಶೋಧಕ ಕೊಡಾಲಿ ಶ್ರೀನಿವಾಸ್ 1.34 ಲಕ್ಷ ಆಧಾರ್ ಕಾರ್ಡ್ ಹೊಂದಿರುವವರ ಧರ್ಮ ಮತ್ತು ಜಾತಿಗಳಂತಹ ವಿವರಗಳನ್ನು ಹೊಂದಿರುವ ಸೂಕ್ಷ್ಮ ಮಾಹಿತಿಯು ಆಂಧ್ರಪ್ರದೇಶ ರಾಜ್ಯ ವಸತಿ ನಿಗಮದ ವೆಬ್ಸೈಟ್ನಿಂದ ಸೋರಿಕೆಯಾಗಿರುವುದನ್ನು ಬಹಿರಂಗಪಡಿಸಿದ್ದರು.